ದಾಸರಮುತ್ತೇನಹಳ್ಳಿ (ಕಂಚಿನ ಕೋಟೆ)ಯಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ 51ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

ನಾಯಕನಹಟ್ಟಿ:: ಸೆ. 2. ಹೋಬಳಿಯ ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸರಮುತ್ತೇನಹಳ್ಳಿ (ಕಂಚಿನ ಕೋಟೆ)ಯಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಐವತ್ತೊಂದನೇ ವರ್ಷದ ಹುಟ್ಟು ಹಬ್ಬವನ್ನು ಸಂಭ್ರಮಿಸಿದರು.
ನಟ ಸುದೀಪ್ ರವರ 31 ಅಡಿ ಬೃಹತ್ ಬ್ಯಾನರ್ ಕಟ್ಟಿ, ಭಾನುವಾರ ತಡರಾತ್ರಿ 12 ಗಂಟೆಗೆ ಕಿಚ್ಚ ಸುದೀಪ್ ಅಭಿಮಾನಿಗಳು ಅಭಿನಯ ಚಕ್ರವರ್ತಿಯ 51ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.
ತಮ್ಮ ನೆಚ್ಚಿನ ನಾಯಕ ನಟನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು ಪ್ರತಿ ವರ್ಷ ತಪ್ಪದೇ ಕಿಚ್ಚ ಸುದೀಪ್ ಅಭಿಮಾನಿಗಳು ಹುಟ್ಟು ಹಬ್ಬ ಆಚರಿಸುತ್ತಾ ಬಂದಿದ್ದಾರೆ.

ಇನ್ನೂ ಸೋಮವಾರ ಮಧ್ಯಾಹ್ನ 3 ಗಂಟೆಗೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 51ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು ಇನ್ನೂ ಕಿಚ್ಚ ಸುದೀಪ್ ಅಭಿಮಾನಿ ಬಳಗದಿಂದ ವಿದ್ಯಾರ್ಥಿಗಳಿಗೆ ಪೆನ್ನು ನೋಟ್ ಬುಕ್ ವಿತರಿಸಿ ಕೇಕ್ ಕತ್ತರಿಸಿ ಸಿಹಿ ಹಂಚಿ ವಿದ್ಯಾರ್ಥಿಗಳ ಮೂಲಕ ಅಭಿನಯ ಚಕ್ರವರ್ತಿಗೆ ಜನ್ಮದಿನದ ಶುಭಾಶಯಗಳು ತಿಳಿಸಿದರು.

ಈ ಸಂದರ್ಭದಲ್ಲಿ ದಾಸರಮುತ್ತೇನಹಳ್ಳಿ (ಕಂಚಿನಕೋಟೆ ಕಿಚ್ಚ ಸುದೀಪ್ ಅಭಿಮಾನಿ ಬಳಗದವರು ಇದ್ದರು .

About The Author

Namma Challakere Local News
error: Content is protected !!