ಶ್ರಾವಣ ಮಾಸದ ನಾಲ್ಕನೇ ಶುಭ ಸೋಮವಾರ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಸರದಿಯ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ದರ್ಶನ ಪಡೆದರು.
ನಾಯಕನಹಟ್ಟಿ:: ಮಾಡಿದಷ್ಟು ನೀಡು ಭಿಕ್ಷೆ ಎಂಬ ವಾಣಿಯನ್ನು ನಾಡಿಗೆ ಸಾರಿದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಸರದಿಯ ಸಾಲಿನಲ್ಲಿ ನಿಂತು ದಶನವನ್ನು ಪಡೆದರು.
ಪಟ್ಟಣದಲ್ಲಿ ಒಳಮಠದ ಶ್ರೀ ಗುರು ತಿಪ್ಪೆರುದ್ರಸ್ವಾಮಿ ಶ್ರಾವಣ ಮಾಸದ ನಾಲ್ಕನೇ ಶುಭ ಸೋಮವಾರ ಸಾವಿರಾರು ಭಕ್ತರು ಸರದಿಯ ಸಾಲಿನಲ್ಲಿ ನಿಂತು ದರ್ಶನವನ್ನು ಪಡೆಯುವ ದೃಶ್ಯ ಕಂಡು ಬಂತು
ಇದೇ ವೇಳೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ ಮಾತನಾಡಿದರು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಶ್ರಾವಣ ಮಾಸದ ಪ್ರಯುಕ್ತ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿ ದರ್ಶನವನ್ನು ಪಡೆಯುತ್ತಿದ್ದಾರೆ.
ಶ್ರೀ ಗುರು ತಿಪ್ಪೇರುದ್ರಸ್ವಾಮಿ ಆಶೀರ್ವಾದದಿಂದ ನಾಡಿಗೆ ಉತ್ತಮ ಮಳೆ ಬೆಳೆಯಾಗಲಿ ಭಕ್ತರ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಲಿ ದೇವರ ದರ್ಶನ ಪಡೆದ ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಸಿಬ್ಬಂದಿಗಳಾದ ಎಸ್. ಸತೀಶ್, ಮನು, ಹಾಗೂ ಸಿಬ್ಬಂದಿಗಳು ಭಕ್ತಾದಿಗಳು ಇದ್ದರು