5,251ನೇ ಶ್ರೀ ಕೃಷ್ಣ ದಿನಾಚರಣೆ ತಾಲೂಕ ಆಡಳಿತ ವತಿಯಿಂದ ನಡೆಸಲಾಯಿತು ,

ಚಳ್ಳಕೆರೆ
ಮಹಾಭಾರತದ ಖಥಾನಾಯಕ ಎಂದೇ ಹೆಸರುವಾಸಿಯಾಗಿರುವ ಶ್ರೀ ಕೃಷ್ಣ ದೈವ ಮಾನವನಾಗಿದ್ದು, ಸಾಮಾಜಿಕ ನೀತಿ ಹಿಂದೂ ಧರ್ಮದ ಧಾರ್ಮಿಕ ತತ್ವ ಸಿದ್ಧಾಂತದೊಂದಿಗೆ ಧರ್ಮ ಉಳಿವಿಗಾಗಿ ಹೋರಾಡಿದಂತಹ ಮಹಾನ್ ಪುರುಷ ಲೋಕ ಉದ್ಧಾರಕ ಶ್ರೀ ಕೃಷ್ಣ ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು,

ಇವರು ನಗರದ ತಾಲೂಕ ಆಡಳಿತ ವತಿಯಿಂದ ಆಯೋಜಿಸಿರುವ 5251 ನೇ ದಿನಾಚರಣೆಯಲ್ಲಿ ಭಾಗಿಯಾಗಿ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಇವರು

ಭಗವಾನ್ ಶ್ರೀಕೃಷ್ಣರು ಅಧರ್ಮವನ್ನು ಮೆಟ್ಟಿ ನಿಂತು ಧರ್ಮದ ನಿಟ್ಟಿನಲ್ಲಿ ಹಿಂದೂ ಧರ್ಮದ ತತ್ವ ಸಿದ್ಧಾಂತವನ್ನು ಜನಸಾಮಾನ್ಯರಿಗೆ ತಿಳಿಸಿ ತಮ್ಮ ಬಾಲ್ಯದಿಂದ ಪ್ರೌಢಾವಸ್ಥೆವರೆಗೂ ಲೋಕ ಉದ್ಧಾರಕ್ಕಾಗಿ ಧರ್ಮದ ವಿರುದ್ಧ ಏಕತೆಯನ್ನು ಸಾರಿದ ಮಹಾನ್ ಪುರುಷ ಶ್ರೀ ಕೃಷ್ಣ ರು ಇವರು ಒಂದೇ ಧರ್ಮಕ್ಕೆ ಸೀಮಿತವಾಗದೆ ಎಲ್ಲಾ ಧರ್ಮವನ್ನು ಒಂದು ಗೂಡಿಸಿ ಧರ್ಮದ ನೆಲಗಟ್ಟಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮುಂದಾಗಿದ್ದಾರೆ, ಮಹಾಭಾರತದ ಗ್ರಂಥ ಕಥಾನಾಯಕ ಶ್ರೀಕೃಷ್ಣರ ತತ್ವ ಸಿದ್ಧಾಂತವನ್ನು ಮಾನವರಾದ ನಾವು ನೀವೆಲ್ಲ ಅವರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕಾಗಿದೆ, ಅಂದಾಗಲೇ ಮಾತ್ರ ದೈವ ಮಾನವರಾದ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿದಂತಾಗುತ್ತದೆ ಎಂದು ಸ್ಮರಿಸಿದರು ,

ಇನ್ನು ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ರೆಯನ್ ಪಾಷಾ ಗೊಲ್ಲ ಸಮುದಾಯದ ಮಂಜಪ್ಪ ಮಾತನಾಡಿದರು ,

ಇನ್ನು ಈ ವೇಳೆ ನಗರಸಭಾ ಸದಸ್ಯ ವೀರಭದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್, ಗದ್ದಿಗೆ ತಿಪ್ಪೇಸ್ವಾಮಿ, ಹನುಮಂತಪ್ಪ, ಡಿವೈಎಸ್ಪಿರಾಜಣ್ಣ, ತಿಪ್ಪೇಸ್ವಾಮಿ, ಶ್ರೀನಿವಾಸ್, ಪರಶಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್, ಸೇರಿದಂತೆ ಅನೇಕರು ಇದ್ದರು ,

About The Author

Namma Challakere Local News
error: Content is protected !!