ಚಳ್ಳಕೆರೆ :
ಧರ್ಮಪುರದಲ್ಲಿ 19.1 ಮಿಲಿಮೀಟರ್ ಅತೀ ಹೆಚ್ಚು
ಮಳೆಯಾಗಿದೆ
ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ ವ್ಯಾಪ್ತಿಯಲ್ಲಿ,
ಸತತ ಮಳೆಯಿಂದಾಗಿ, 19. 1 ಮಿಲಿಮೀಟರ್ ಮಳೆಯಾಗಿದೆ
ಎಂದು ಜಿಲ್ಲಾಡಳಿತ ವರದಿ ನೀಡಿದೆ.
ಈ ಭಾಗದಲ್ಲಿರುವ
ಹಳ್ಳಕೊಳ್ಳಗಳು ಚೆಕ್ ಡ್ಯಾಂಗಳು, ಬ್ಯಾರೇಜ್ ಗಳು ತುಂಬಿ
ಹರಿಯುತ್ತಿದ್ದು, ಕಂಡು ಬರುತ್ತಿದೆ. ಮಳೆಗಾಗಿ ಕಾಯುತ್ತಿದ್ದ, ರೈತರ
ಮೊಗದಲ್ಲಿ ಸಂತಸ ಮೂಡಿದೆ. ಕೊಳವೆ ಬಾವಿಗಳು ರಿಚಾರ್ಜ್
ಆಗಲು ಕೂಡ ಮಳೆ ಕಾರಣವಾಗಿದೆ ಎಂದು ರೈತರು ಹೇಳುತ್ತಾರೆ.
ಒಟ್ಟಾರೆ ಮಳೆಗಾಗಿ ಕಾಯುತ್ತಿದ್ದ ರೈತಾಪಿ ವರ್ಗ ಮಳೆಯಿಂದ
ಸಂತೃಪ್ತರಾಗಿದ್ದಾರೆ.