ಚಳ್ಳಕೆರೆ :
ಅರಣ್ಯ ಇಲಾಖೆಯಿಂದ ಚಿಣ್ಣರ ವನ ದರ್ಶನ
ಕಾರ್ಯಕ್ರಮ
ತಾಲ್ಲೂಕಿನ ಪರಶುರಾಮಪುರ ಸರ್ಕಾರಿ ಪ್ರೌಢ ಶಾಲೆಯ
ಮಕ್ಕಳನ್ನು ತಾಲೂಕು ಅರಣ್ಯ ಇಲಾಖೆ ವತಿಯಿಂದ ಒಂದು ದಿನದ
ಚಿಣ್ಣರ ವನ ದರ್ಶನದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಗರದ ಸಾಲು ಮರದ ತಿಮ್ಮಕ್ಕ ಪಾರ್ಕ್ ನಿಂದ ಹೊರಟ ಬಸ್ ಗೆ
ಸಹಾಯಕ ಅರಣ್ಯ ಸಂರಕ್ಷಣಧಿಕಾರಿ ಹಿರಿಯೂರು ಉಪ ವಿಭಾಗ
ಎಸಿಎಫ್ ಓ ಎಸ್. ಸುರೇಶ್ ಹಸಿರು ನಿಶಾನೆ ತೋರುವುದರ
ಮೂಲಕ ಚಾಲನೆ ನೀಡಿದರು.
ಈ ವೇಳೆ ಮಕ್ಕಳಿಗೆ ಚಿಣ್ಣರ
ವನ ದರ್ಶನದ ಬ್ಯಾಗ್ ಕಿಟ್ ಕಾನನ ಕಣಜ ಪುಸ್ತಕಗಳನ್ನು
ವಿತರಿಸಲಾಯಿತು.