ಚಳ್ಳಕೆರೆ : ಅಕ್ರಮವಾಗಿ ಪಾದಚಾರಿ ರಸ್ತೆಗಳು ಹಾಗೂ ಶಾಲಾ ಕಾಲೇಜು ಸಮೀಪ ಗೂಡ ಅಂಗಡಿಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾದ ಕಾಲೇಜ್ ಆಡಳಿತ ಹಾಗೂ ವಿದ್ಯಾರ್ಥಿಗಳು ಪ್ರಾಶುಂಪಾಲರ ನೇತೃತ್ವದಲ್ಲಿ ಇಂದು ಕಾಲೇಜ್ ಸಮೀಪ ಇರುವ ಹಲವು ಗೂಡ ಅಂಗಡಿ ಗಳಿಗೆ ಬೀಗ ಜಡಿದು ಸೀಜ್ ಮಾಡಿದ್ದಾರೆ.
ಇನ್ನೂ ನಗರದಲ್ಲಿ ಯಾವ ಅಧಿಕಾರಿಗಳ , ಜನಪ್ರತಿನಿದಿಗಳ ಮಾತಿಗೂ ಕಿವಿ ಗೊಡದ ಬೀದಿ ಬದಿ ವ್ಯಾಪಾರಿಗಳು ಅತೀ ಕಡಿಮೆ ಬಂಡವಾಳ ಹೂಡಿ ಹೆಚ್ನ ಲಾಭ ತೆಗೆಯುವ ಉದ್ದೇಶ ದಿಂದ ಹಳ್ಳಿಗಳನ್ನು ತೊರೆದು ಪಟ್ಟಣ ಸೇರುತ್ತಿದ್ದಾರೆ.
ಇನ್ನೂ ಯಾವ ಅಧಿಕಾರಿಗಳಿಗೆ ಕಿಮ್ಮತ್ತುನೀಡದ ಅವರಿ ರಾಜಕೀಯ ಬೆಂಬಲ ದಿಂದ ರಾಜಾರೋಷವಾಗಿ ಪೆಟ್ಟಿಗೆ ಅಂಗಡಿಗಳು ಇಟ್ಟು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಇನ್ನೂ ಕೆಲವು ಪಾದಚಾರಿಗಳಿಗೆ ರಸ್ತೆಬಿಡದೆ ಅಕ್ರಮಿಸಿಕೊಂಡ ಕಾರಣ ನಡು ರಸ್ತೆಯಲ್ಲಿ ಸಾರ್ವಜನಿಕರು, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ವಯೋ ವೃದ್ದರು ಅಪಘಾತಕ್ಕೆ ಈಡಾದ ನಿದರ್ಶನಗಳು ಇವೆ..
ಆದ್ದರಿಂದ ವಿದ್ಯಾರ್ಥಿಗಳಿಂದಲೇ ಪೆಟ್ಟಿಗೆ ಅಂಗಡಿಗಳಿಗೆ ಬೀಗ
ಜಡಿದ ಪ್ರಸಂಗ ಜರುಗಿದೆ.
ಹೌದು ಇದು ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ಪ್ರಮುಖ ರಸ್ತೆಗೆ
ಹೊಂದಿಕೊಂಡ ಸರಕಾರಿ ಪದವಿ ಕಾಲೇಜು ಮುಂಭಾಗದಲ್ಲಿ
ಅಕ್ರಮವಾಗಿ ತಲೆ ಎತ್ತಿದ್ದ ಎಗ್ ರೈಸ್.ಬೀಡ ಅಂಗಡಿ ಸೇರಿದಂತೆ ವಿವಿಧ
ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಕಾಲೇಜು ವತಿಯಿಂದ
ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗದೆ
ಇರುವುದರಿಂದ ಕಾಲೇಜು ಪ್ರಾಚಾರ್ಯ ಮಂಜುನಾಥ್ ಹಾಗೂ
ವಿದ್ಯಾರ್ಥಿಗಳು ಪೆಟ್ಟಿಗೆ ಅಂಗಡಿಗಳಿಗೆ ಬೀಗ ಹಾಕಿ ಶಾಖ್ ನೀಡಿದ್ದಾರೆ.