ಚಳ್ಳಕೆರೆ :
ತಾಲೂಕಿನ ಎಲ್ಲಾ ರೈತರು
ಶೇಂಗಾ ತೊಗರಿ ಬೆಳೆಗಳಿಗೆ ಮೇಲುಗೊಬ್ಬರ ಹಾಕುವಂತೆ ಸಹಾಯಕ ಕೃಷಿ ನಿರ್ದೇಶಕ ಆರ್.ಅಶೋಕ ಹೇಳಿದ್ದಾರೆ.
ಅವರು ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದ ಅವರು
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಾದ್ಯಾಂತ ಎಲ್ಲಾ ಬೆಳೆಗಳು
ಸೇರಿ 87,765 ಹೆಕ್ಟೇರ್
ಗುರಿಗೆ ಇದುವರೆಗೂ 78,119 ಹೆಕ್ಟೇರ್ (ಶೇ 89%) ಬಿತ್ತನೆಯಾಗಿದೆ.
ಇದರಲ್ಲಿ ಶೇಂಗಾ 51440 ಹೆಕ್ಟೇರ್,
ತೊಗರಿ 11242 ಹೆಕ್ಟೇ ಸಿರಿಧಾನ್ಯಗಳು 1853 ಹೆಕ್ಟೇರ್, ಮೆಕ್ಕೆಜೋಳ 6485 ಹೆಕ್ಟೇರ್ ಮತ್ತು ಹರಳು 360
ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಈ ಎಲ್ಲಾ ಬೆಳೆಗಳಲ್ಲಿ ಶೇಕಡ 25ರಷ್ಟು ಪ್ರದೇಶದಲ್ಲಿ ಜೂನ್
ಮೂರನೇ ವಾರದಲ್ಲಿ ಬಿತ್ತನೆಯಾಗಿತ್ತು. ಉಳಿದಂತೆ ಎಲ್ಲಾ ಬೆಳೆಗಳು ಜುಲೈ 15 ರ ನಂತರ ಬಿತ್ತನೆಯಾಗಿದ್ದು
ಬೆಳೆವಣಿಗೆ ಹಂತದಲ್ಲಿರುತ್ತವೆ.
ಈ ಬೆಳೆಗಳು ಜುಲೈ ತಿಂಗಳಿನಲ್ಲಿ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ಮಳೆಯಾಗದ ಕಾರಣ
ಬೆಳೆವಣಿಗೆ ಕುಂಠಿತವಾಗಿತ್ತು. ಆದರೆ ಕಳೆದ ಒಂದು ವಾರದಿಂದ ತಾಲ್ಲೂಕಿನಾದ್ಯಾಂತ ಉತ್ತಮ
ಮಳೆಯಾಗಿದ್ದು ಎಲ್ಲಾ ಬೆಳೆಗಳಲ್ಲಿ ಚೇತರಿಕೆ ಕಾಣುತ್ತಿದೆ.
45 ದಿನದಿಂದ 50 ದಿನದ ಹಂತದಲ್ಲಿ ಶೇಂಗಾ,
ತೊಗರಿ, ಬೆಳೆಗಳು ಇದ್ದು ಈ ಬೆಳೆಗಳಿಗೆ ಮೇಲುಗೊಬ್ಬರ ಹಾಕಲು ಸಕಾಲವಾಗಿದೆ. ಉತ್ತಮ
ತೇವಾಂಶವಿರುವುದರಿಂದ ಯೂರಿಯಾ, ಎನ್.ಪಿ.ಕೆ, ಮಿಶ್ರಣ ಗೊಬ್ಬರಗಳನ್ನು ಭೂಮಿಗೆ ಹಾಕಬೇಕು.
ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ ದ್ರವರೂಪದ ಗೊಬ್ಬರಗಳನ್ನು ಸಿಂಪರಣೆ ಮಾಡಬಹುದು.
ಶೇಂಗಾ ಬೆಳೆಗೆ ಜಿಪ್ಸಂ ಮತ್ತು ಲಘು ಪೋಷಕಾಂಶಗಳನ್ನು ನೀಡಿದಲ್ಲಿ ಉತ್ತಮ ಬೆಳವಣಿಗೆ ಮತ್ತು
ಇಳುವರಿಯನ್ನು ಪಡೆಯಬಹುದಾಗಿದೆ ಎಂದರು.