ಚಳ್ಳಕೆರೆ :
ಭಾರತ ಆಯುರ್ವೇದ ಚಿಕಿತ್ಸೆಗೆ ಪ್ರಾಚೀನ ಪರಂಪರೆ
ಇದೆ: ಟಿ. ರಘುಮೂರ್ತಿ
ಆಯುರ್ವೇದ ಎನ್ನು ಪದವು ಜೀವನದ ವಿಜ್ಞಾನ ಎಂದೇ ಆಗಿದೆ.
ಇತರ ವೈದ್ಯಕೀಯ ಪದ್ಧತಿಗಳಿಗಿಂತ ವಿಭಿನ್ನವಾಗಿ, ಆಯುರ್ವೇದವು
ರೋಗಗಳ ಚಿಕಿತ್ಸೆಗಿಂತ ಹೆಚ್ಚಾಗಿ ಅರೋಗ್ಯವಂತ ಜೀವನ
ನಡೆಸುವುದಕ್ಕೆ ಹೆಚ್ಚಿನ ಪ್ರಾಶಸ್ತ್ರ ನೀಡುತ್ತದೆ ಎಂದು ಶಾಸಕ ಟಿ.
ರಘುಮೂರ್ತಿ ಹೇಳಿದರು.
ನಗರದ ಬೆಂಗಳೂರು ರಸ್ತೆಯ ನಿರ್ಮಾಲ ಕನ್ವೆನ್ಸನ್ ಹಾಲ್ ನಲ್ಲಿ
ನಡೆದ ಪಾರಂಪರಿಕ ಆಯುರ್ವೇದ ಪ್ರಥಮ ಚಿಕಿತ್ಸೆ ವೈದ್ಯರ ಸಂಘ
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.