ತಾಲೂಕು ನಿವೃತ್ತಿ ನೌಕರರ ಸಂಘದಿಂದ ಸರ್ವ ಸದಸ್ಯರ ಮಹಾಸಭೆ ,

ಚಳ್ಳಕೆರೆ ,
ನಿವೃತ್ತಿ ಹೊಂದಿದ ವೃದ್ಧರು ತಮ್ಮ ದೈನಂದಿನ ಚಟುವಟಿಕೆಯ ಜೊತೆ ವಾಕ್ ವ್ಯಾಯಾಮ ಯೋಗದ ಕಡೆ ಮೊರೆ ಹೋಗಿ ನಿಮ್ಮ ದೇಹ ಹಾಗೂ ಮನಸ್ಸುನ ಮಾನಸಿಕ ಅಸ್ಥಿರತೆ ಹೊಡೆದು ಹಾಕಲು ಸಾಧ್ಯ ಎಂದು ಶಾಸಕ ಟಿ ರಘು ಮೂರ್ತಿ ತಿಳಿಸಿದರು ,

ಇವರು ನಗರದ ನೌಕರ ಭವನದಲ್ಲಿ ಆಯೋಜಿಸಿರುವ ತಾಲೂಕು ನಿವೃತ್ತ ನೌಕರರ ಸಂಘ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸುವ ಮಾತನಾಡಿದ ಇವರು ,

ನಿವೃತ್ತಿ ಹೊಂದಿದ ನೌಕರರು ಎಲ್ಲಾ ಸರ್ಕಾರಿ ಇಲಾಖೆಯಲ್ಲಿ ತಮ್ಮ ಜೀವನದ ಏಳುಬೀಳುಗಳನ್ನು ಕಂಡಿದ್ದೀರಿ, ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎನ್ನುವ ಪಾಠವನ್ನು ಕೂಡ 60ವರ್ಷ ಒಳಗೆ ನೀವೆಲ್ಲ ಅನುಭವಿಸಿದ್ದೀರಿ ,ನೀವು ಅನುಭವಿಸಿರುವ ಪಾಠಗಳನ್ನು ಹಲವಾರು ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಜೊತೆ ಮತ್ತು ಮಕ್ಕಳ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡು ನೆಮ್ಮದಿಯ ಜೀವನವನ್ನು ಸಾಗಿಸ ಬೇಕಾಗುತ್ತದೆ,

ನೌಕರರು ನಮಗೆ ವಯಸ್ಸಾಗಿದೆ ಎಂದು ತಿಳಿದುಕೊಳ್ಳದೆ ದಿನನಿತ್ಯದ ಚಟುವಟಿಕೆಯಲ್ಲಿ ಭಾಗವಹಿಸಿ ಅಂದಾಗಲೇ ಮಾತ್ರ ವಯಸ್ಸಿನ ಅಂತರ ಸಿಗುವುದಿಲ್ಲ ಹಾಗೆ ನೌಕರ ಭವನವು ಈಗಾಗಲೇ ನಿರ್ಮಿಸಿದ್ದೇವೆ ಇದು ಅಲ್ಲದೆ ನಿವೃತ್ತಿ ನೌಕರರು ನಮಗೊಂದು ಶಾಂತಿಧಾಮ ನಿರ್ಮಿಸಿ ಕೊಡಬೇಕು ಎಂದು ನಮ್ಮಲ್ಲಿ ಮನವಿ ಕೋರಿಕೊಂಡಿದ್ದೀರಿ. ಈ ಮನವಿಯನ್ನು ನಾನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ನಿವೃತ್ತಿ ನೌಕರರ ಶಾಂತಿ ಧಾಮವನ್ನು ನಿರ್ಮಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು,

ಇನ್ನು ಈ ಸಂದರ್ಭದಲ್ಲಿ ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಯ್ಯ, ನೌಕರ ಸಂಘದ ಅಧ್ಯಕ್ಷ ಲಿಂಗೇಗೌಡ, ಕರಿಯಪ್ಪ ಮಾಸ್ಟರ್, ಶಂಭುಲಿಂಗಯ್ಯ ,ತಿಪ್ಪೇಶಪ್ಪ, ಗೋಪಾಲಪ್ಪ, ಅಂಜನಪ್ಪ , ಮಕ್ಕಳ ತಜ್ಞ ಚಂದ್ರನಾಯಕ್, ಅಂಜನಪ್ಪ ಸೇರಿದಂತೆ ಅನೇಕ ನಿವೃತ್ತ ನೌಕರರು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು

Namma Challakere Local News
error: Content is protected !!