ಚಳ್ಳಕೆರೆ :

ಕಳೆದ ಹಲವಾರು ದಿನಗಳಿಂದ ನಿವೇಶನ ಭೂಮಿಗಾಗಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಟಿ.ರಘುಮೂರ್ತಿ ಬೇಟಿ ನೀಡಿ ಧರಣಿ ನಿರತರೊಂದಿಗೆ ಕೆಲ ಕಾಲ ಮಾತನಾಡಿದ ಅವರು ನಾನು ಮೂರನೇ ಬಾರಿ ಶಾಸಕನಾದ ನಂತರ ಇದೇ ಮೊದಲ ಬಾರಿಗೆ ನಿವೇಶನಕ್ಕಾಗಿ ನಡೆಸುತ್ತಿರುವ ಧರಣಿ ಇದಾಗಿದೆ.

ಆದರೆ ಕಳೆದ ನನ್ನ ಹನ್ನೊಂದು ವರ್ಷದ ಶಾಸಕ ಅವಧಿಯಲ್ಲಿ ದೀನ ದಲಿತರಿಗೆ, ನೊಂದವರಿಗೆ, ಕಡುಬಡವರಿಗೆ ನಿವೇಶನ ಹಾಗೂ ಮನೆ ಕೊಡುವ ಕೆಲಸಗಳನ್ನು ಮಾಡಿದ್ದೆನೆ ಇನ್ನೂ ನಿರಂತರವಾಗಿ ಮಾಡುತ್ತಲೆ ಇದ್ದೆನೆ ಆದರೆ ಕೆಲವೊಂದು ಬಾರಿ ಇಂತಹ ಸಂಗತಿಗಳು ನಡೆಯುತ್ತವೆ.

ಆದ್ದರಿಂದ ಈ ಕೂಡಲೇ ನಿಗಧಿ ಮಾಡಿರುವ ಐದು ಎಕರೆ ವಸತಿ ನಿವೇಶನ ಭೂಮಿ ಜೊತೆಗೆ ಇನ್ನೂ ಹೆಚ್ಚುವರಿಯಾಗಿ ಮೂರು ಎಕರೆ ಜಾಗವನ್ನು ಗ್ರಾಮದ ಎಲ್ಲಾ ಅರ್ಹ ಫಲಾನುಭವಿಗಳನ್ನು ಹುಡುಕಿ ಕೊಡಲಾಗುತ್ತದೆ.

ತಾಲೂಕು ಕಚೇರಿ ಆವರಣದಲ್ಲಿ ಗಂಜಿಗುಂಟೆ ಗ್ರಾಮದ ದಲಿತ
ಸಮುದಾಯ ನಿವೇಶನಕ್ಕಾಗಿ ಐದನೇ ದಿನಕ್ಕೆ ಕಾಲಿಟ್ಟ ಪ್ರತಿಭಟನಾ
ಸ್ಥಳದಲ್ಲಿ ಭೇಟಿ ನೀಡಿ ಮಾತನಾಡಿದರು

ಈಗಾಗಲೆ ಜಿಲ್ಲಾಧಿಕಾರಿ ಜಿಪಂ ಸಿಇಒ ಗೆ ಸೂಚನೆ ನೀಡಿ ಸಮಸ್ಯೆ
ಬಗೆಹರಿಸುವಂತೆ ಸೂಚನೆ ನೀಡಲಾಗಿತ್ತು
ಅದರಂತೆ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ನಿವೇಶನಕ್ಕೆ
ಮೀಸಲಿಟ್ಟ ಭೂಮಿಯಲ್ಲಿನ ಸ್ವಚ್ಚತೆಗೆ ಮುಂದಾಗಿದ್ದಾರೆ.

ನಿವೇಶನ ವಂಚಿತರಿಗೆ ನಿವೇಶನ ಸಿಗುವುದು ಗ್ಯಾರೆಂಟಿ ನೀವು ಗಾಳಿ
ಮಾತಿಗೆ ಕಿವಿಗೊಡದೆ ಗ್ರಾಮದಲ್ಲಿ ಸಹೋದರಂತೆ ಬಾಳ ಬೇಕು ನಮಗೆ
ಅಧಿಕಾರ ಇರುತ್ತೆ ಹೋಗುತ್ತೆ ಈಗ ಅಧಿಕಾರಿಗಳು ಎಲ್ಲಾ ಸಿದ್ಧತೆ
ಮಾಡಿಕೊಂಡಿದ್ದಾರೆ ನೀವು ಪ್ರತಿ ಭಟನೆಯನ್ನು ಹಿಂಪಡೆದು ಗ್ರಾಮದಲ್ಲಿ
ನೆಮ್ಮದಿಯ ಜೀವನ ಸಾಗಿಸಿ ಎಂದು ಪ್ರತಿಭಟನಾ ಕಾರರಿಗೆ ಅಭಯ
ನೀಡಿದರು.

ಪ್ರತಿಭಟನೆಯ ಮುಖಂಡ ರಂಗಸ್ವಾಮಿ ಮಾತನಾಡಿ ನಮಗೆ ದಲಿತ
ಸಮುದಾಯಕ್ಕೆ ಪ್ರತ್ಯೇಕವಾಗಿ ಒಂದು ಕಡೆ ನೀವೇಶನ ನೀಡುವಂತೆ
ಮನವಿ ನೀಡಿದರು.

ಇದಕ್ಕೆ ಶಾಸಕ ಟಿ.ರಘುಮೂರ್ತಿ ಪ್ರತಿಕ್ರಿಯಿಸಿ ಒಟ್ಟು ಎಷ್ಟು ಎಕರೆ
ಸರಕಾರಿ ಭೂಮಿ ಇದೆ ಎಂದು ತಹಶೀಲ್ದಾರ್ ಗೆ ಮಾಹಿತಿ ಕೇಳಿದರು
ಎಂಟು ಎಕರೆ ಇದೆ ಅದರಲ್ಲಿ ಐದು ಎಕರೆ ಈಗಾಗಲೆ ಆಶ್ರಯ
ನಿವೇಶನಕ್ಕೆ ಮಂಜುರಾತಿ ನೀಡಿದೆ ಎಂದರು.

ಇದಕ್ಕೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ದಲಿತ ಸಮುದಾಯಕ್ಕೆ
ಎರಡು ಎಕರೆ ಮೀಸಲಿಡಿ ಅದರಲ್ಲಿ ಶಾಲೆ ಸಮುದಾಯ ಭವನ
ಮಾಡಲು ಅನುಕೂಲವಾಗುತ್ತದೆ ಒಂದು ವಾರದೊಳಗೆ ನಿವೇಶನ
ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ತಾಪಂ ಇಒಶಶಿಧರ್, ನಗರಸಭೆ ಸದಸ್ಯರಾದ
ವೀರಭದ್ರಪ್ಪ,ರಾಘವೇಂದ್ರ, ವಕೀಲರಾದ ಶಶಿಕುಮಾರ್, ಶಿವಮೂರ್ತಿ,
ಇತರರಿದ್ದರು.

ಬಾಕ್ಸ್ ಮಾಡಿ :

ಶಾಸಕರ ಮಾತಿಗೆ ಧರಣಿ ಕೈಬಿಟ್ಟ ಗಂಜಿಗುಂಟೆ ದಲಿತರು.

ಕಳೆದ ಐದು ದಿನಗಳಿಂದ ನಿರಂತರವಾಗಿ ನಿವೇಶನ ರಹಿತರು ಭೂಮಿಗಾಗಿ ಅಹೋರಾತ್ರಿ ದರಣಿ ಸತ್ಯಾಗ್ರಹ ನಡೆಸುತ್ತಿರುವ ಗಂಜಿಗುಂಟೆ ದಲಿತರ ಬಳಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ, ತಹಶಿಲ್ದಾರ್ ರೇಹಾನ್ ಪಾಷ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್, ಈಗೇ ಹಲವು ಅಧಿಕಾರಿಗಳು ಬಂದು ನಿಮ್ಮ ಬೇಡಿಕೆಗೆ ಅತೀ ತುರ್ತಾಗಿ ಸ್ಪಂದಿಸುತ್ತೆ, ಎಂದು ಮನವಿ‌ ಮಾಡಿದರು ಕಿವಿಗೊಡದ ಧರಣಿ ನಿರತರು, ಭಾನುವಾರ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಧರಣಿ ನಿರತರನ್ನು ಮನವೊಲಿಸಿ ಅವರ ಬೇಡಿಕೆಗೆ ಸ್ಪಂದಿಸುವುದಾಗಿ ಹೇಳಿದ ತಕ್ಷಣವೇ ಧರಣಿಯನ್ನು‌ ಕೈ ಬಿಟ್ಟು ಮನೆಕಡೆ ನಡೆದಿದ್ದಾರೆ.ಶಾಸಕರ ಮೇಲೆ ಇಟ್ಟ ಭರವಸೆ, ನಂಬಿಕೆಯನ್ನು ಧರಣಿನಿರತರಲ್ಲಿ ಕಾಣಬಹುದಾಗಿತ್ತು.

Namma Challakere Local News
error: Content is protected !!