ಆಶ್ರಯ ಯೋಜನೆ ನಿವೇಶನಕ್ಕಾಗಿ ಅನಿರ್ಧಿಷ್ಟ ಧರಣಿ ಸತ್ಯಾಗ್ರ ನಿಲ್ಲಿಸಿ; ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ ,

ಚಳ್ಳಕೆರೆ ,
ಸೋಮವಾರದಿಂದಲೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಗ್ರಾಮದ ನಿವೇಶನ ಹಂಚಿಕೆಗೆ ನಿವೇಶನ ಪಡೆಯಲು ತಾಲೂಕು ದಂಡಾಧಿಕಾರಿಗಳು ಸರ್ವೆ ಆಫೀಸಿನ ಅಧಿಕಾರಿಗಳು ಸರ್ವೇ ಮಾಡಿ ವಂಚಿತ ಫಲಾನುಭವಿಗಳಿಗೆ ಖಂಡಿತ ನಿವೇಶನ ನೀಡುತ್ತೇವೆ ಎಂದು ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ ತಿಳಿಸಿದರು ,

ಇವರು ನಗರದ ತಾಲೂಕು ಕಚೇರಿಯ ಮುಂಭಾಗದ ಆವರಣದಲ್ಲಿ ನಾಲ್ಕು ದಿನಗಳ ಕಾಲ ಆಶ್ರಯ ಯೋಜನೆ ನಿವೇಶನಕ್ಕಾಗಿ ಅನಿರ್ಧಿಷ್ಟ ಧರಣಿಯಲ್ಲಿ ಭಾಗವಹಿಸಿ ಸಂತ್ರಸ್ತರಿಗೆ ಮನವೊಲಿಸಿ ಮಾತನಾಡಿದ ಇವರು,

ಆಶ್ರಯ ನಿವೇಶನಕ್ಕಾಗಿ ಗಂಜಿಗುಂಟೆ ಗ್ರಾಮದ ದಲಿತ ಸಮುದಾಯದವರು ಸತತ ನಾಲ್ಕು ದಿನಗಳ ಕಾಲ ಧರಣಿ ಮಾಡುತ್ತಿದ್ದೀರಿ, ನಿಮ್ಮ ಗ್ರಾಮದ ಐದು ಎಕರೆ ಸರಕಾರ ಮೀಸಲಿಟ್ಟಿರುವ ಜಾಗವನ್ನು ಕೆಲವರು ಬಣವೆಗಳನ್ನು ಮಾಡಿಕೊಂಡು ನಿವೇಶನ ನಿರ್ಮಿಸಿಕೊಂಡಿದ್ದಾರೆ, 2016-17 ರಲ್ಲಿ ಅಂದಿನ ಸರ್ಕಾರ ಆಶ್ರಯ ಯೋಜನೆ ವಸತಿಗಾಗಿ ಸರಕಾರ ಗೋಮಾಳ ಜಾಗವನ್ನು ನಿಗದಿಪಡಿಸಿತ್ತು ಈ ಹಿನ್ನಲೆಯಲ್ಲಿ ಸ್ಥಳೀಯ ಶಾಸಕರಾದ ಟಿ ರಘುಮೂರ್ತಿ ರವರು ಈ ವಿಷಯವಾಗಿ ಚರ್ಚಿಸಿ ಫಲಾನುಭವಿಗಳಿಗೆ ನಿವೇಶನ ನೀಡಿ ಎಂದು ಹೇಳಿದ್ದರು ಈ ಒಂದು ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕ ಆಡಳಿತ ಜೊತೆಗೂಡಿ ನಿಮ್ಮ ಗ್ರಾಮಕ್ಕೆ ಅರ್ಹ ಫಲಾನುಭವಿಗಳಿಗೆ ನಿವೇಶ ಹಂಚಿಕೆ ಮಾಡುತ್ತೇವೆ ಎಂದು ಖಡಕ್ ಭರವಸೆ ನೀಡಿದರು ,

ಇನ್ನು ಈ ಸಂದರ್ಭದಲ್ಲಿ ತಾಲೂಕು ಕಚೇರಿಯ ಸಭಾಂಗಣದಲ್ಲಿ ಪತ್ರಕರ್ತರ ನಿವೇಶನಗಳು ಸುಮಾರು ವರ್ಷಗಳಿಂದ ನೆನೆಗುರಿಗೆ ಬಿದ್ದಿರುವುದು ಖಂಡನೆಯ ಎಂದು ಗೋಪ್ನಹಳ್ಳಿ ಶಿವಣ್ಣ ಆರೋಪಿಸಿದರು,

ಅಪಾರ ಜಿಲ್ಲಾಧಿಕಾರಿ ಕುಮಾರ್ ಸ್ವಾಮಿ ಮಾತನಾಡಿ ಪತ್ರಕರ್ತರ ನಿವೇಶನವನ್ನು ಕೂಡಲೇ ನಾವು ಕೈಗೆತ್ತಿಕೊಂಡು ಕೆಲವೇ ದಿನಗಳಲ್ಲಿ ಪತ್ರಕರ್ತರಿಗೆ ನಿವೇಶನವನ್ನು ನೀಡುವುದಾಗಿ ಪತ್ರಕರ್ತರಿಗೆ ತಿಳಿಸಿದರು ,

ಇನ್ನು ಈ ಸಂದರ್ಭದಲ್ಲಿ ತಹಸಿಲ್ದಾರ್ ರಹಾನ್ ಪಾಷಾ, ತಾಲೂಕು ಪಂಚಾಯಿತಿಯ EO ಶಶಿಧರ್, ರಂಗಸ್ವಾಮಿ ಪ್ರಕಾಶ್ ವಿ ಎ ತಿಪ್ಪೇಸ್ವಾಮಿ ಸೋಮಶೇಖರ್ ಸೇರಿದಂತೆ ಅನೇಕ ತಾಲೂಕ ಆಡಳಿತದ ಅಧಿಕಾರಿಗಳು ಜಿಲ್ಲಾ ಆಡಳಿತ ಅಧಿಕಾರಿಗಳು ಪ್ರತಿಭಟನಾಕಾರರು ಭಾಗಿಯಾಗಿದ್ದರು

Namma Challakere Local News
error: Content is protected !!