ಚಳ್ಳಕೆರೆ :
ಮಾಜಿ ಸಚಿವ ಬಿಸಿ ಪಾಟೀಲ್ ಗೆ ಎಚ್ಚರಿಕೆ ನೀಡಿದ
ಸಿರಿಗೆರೆ ಮಠದ ಭಕ್ತರು
ಮಾಜಿ ಸಚಿವ ಬಿಸಿ ಪಾಟೀಲ್ ಅವರು ನನ್ನನ್ನು ಮಂತ್ರಿ ಮಾಡಿಸಿ
ಎಂದು ಮಠಕ್ಕೆ
ಅಲೆದಾಡಿದ್ದು, ಇದೀಗ ಅದನ್ನು ಮರೆತು ಗುರುಗಳ
ಹಾಗೂ ಮಠದ ವಿರುದ್ಧ ಎಲ್ಲಿಯೂ ಹಗುರವಾಗಿ ಮಾತಾಡಬಾರದು
ಎಂದು ಹೊಳಲ್ಕೆರೆ ಕ್ಷೇತ್ರದ ಸಿರಿಗೆರೆ ಮಠದ ಭಕ್ತ ರಾಜಣ್ಣ ಎಚ್ಚರಿಕೆ
ನೀಡಿದರು. ಅವರು ಮಠದಲ್ಲಿ ನಡೆದ ಸಭೆಯಲ್ಲಿ ಮಾತಾಡಿದರು.
ನಾವು ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ. ಡಾ.
ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಅನುಮತಿ ಪಡೆದು, ಈ
ಸಭೆಯನ್ನು ಕರೆದಿದ್ದೇವೆ ಎಂದರು.