filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;

ಚಳ್ಳಕೆರೆ :

ಕಳೆದ 30 ವರ್ಷಗಳಿಂದ ವಿವಾದದಲ್ಲಿ ಇರುವ ದಾರಿ ಸಮಸ್ಯೆಯನ್ನು ಇತ್ಯಾರ್ಥಪಡಿಸಿದ ತಹಶಿಲ್ದಾರ್ ರೆಹನ್ ಪಾಷಾ.

ಹೌದು ಚಳಕೆರೆ ತಾಲೂಕಿನ ತಳಕು ಹೋಬಳಿಯ ಓಬಣ್ಣನಹಳ್ಳಿ ಯ ಮಜಿರೆ ಗ್ರಾಮ ಬೇಲ್ದಾರಹಟ್ಟಿ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ದಾರಿ ಸಮಸ್ಯೆ ಎರಡು ಸಮುದಾಯಗಳ ಮಧ್ಯೆ ತಲೆದೂರಿತ್ತು.

ಇಂದು ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಸಹಕಾರದೊಂದಿಗೆ ತಹಶೀಲ್ದಾರ್ ರೇಹಾನ್ ಪಾಷರವರು ಹಾಗೂ ಸರ್ವೆ ಇಲಾಖೆಯ ಎಡಿಯಲ್ ಆರ್ ಬಾಬುರೆಡ್ಡಿ ತಂಡದೊಂದಿಗೆ ಎರಡು ಸಮುದಾಯಗಳ ಸಾರ್ವಜಕರನ್ನು ಇಂದು ಮನವೊಲಿಸಿ ದಾರಿ ಸಮಸ್ಯೆಯನ್ನು ಇತ್ಯರ್ಥ ಪಡಿಸಿದ್ದಾರೆ.

ಇನ್ನೂ ಗ್ರಾಮದಲ್ಲಿ ಕುಂಬಾರ ಸಮುದಾಯ ಹಾಗೂ ಈಡೀಗ ಸಮುದಾಯ ಎರಡು ಸಮುದಾಯಗಳು ವಾಸವಿದ್ದು ಈ ಎರಡು ಸಮುದಾಯಗಳ ಮಧ್ಯೆ ಈ ದಾರಿ ಸಮಸ್ಯೆಯಲ್ಲಿ ಹಲವು ಬಾರಿ ಸಂಘರ್ಷಗಳು ನಡೆದು ನ್ಯಾಯಾಲಯದ ಮೆಟ್ಟಿಲು ಹೇರಿರುವ ಪ್ರಕರಣಗಳು ಇವೆ.

ಇನ್ನು ಎರಡು ಸಮುದಾಯಗಳ ಹೊಂದಾಣಿಕೆ ಮೆರೆಗೆ ಇಂದು ತಹಸಿಲ್ದಾರ್ ಅವರ ನೇತೃತ್ವದ ತಂಡ ಎರಡು ಸಮುದಾಯಗಳ ಮನವೋಲಿಸಿ ದಾರಿ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದಾರೆ.

ಇನ್ನು ಸ್ಥಳದಲ್ಲಿ ತಹಶಿಲ್ದಾರ್ ರೇಹಾನ್ ಪಾಷ,
ಕಂದಾಯ ಅಧಿಕಾರಿ ತಿಪ್ಪೆಸ್ವಾಮಿ, ಸರ್ವೇ ಇಲಾಖೆ ಎಡಿಎಲ್ಆರ್ ಬಾಬುರೆಡ್ಡಿ, ತಳಕು ಪೊಲೀಸ್ ಠಾಣೆ ಪಿಎಸ್ಐ ಲೋಕೇಶ್, ಪರಶುರಾಂಪುರ ಪೊಲೀಸ್ ಠಾಣೆಯ ಪಿಎಸ್ ಐ ಮಾರುತಿ, ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಶಿವಕುಮಾರ್, ಡಿಆರ್ ತಂಡ ಸೇರಿದಂತೆ ಸುಮಾರು 30 ಜನ ಪೊಲೀಸರ ತಂಡ ಸ್ಥಳದಲ್ಲಿ ಜಮಾಯಿಸಿದರು.

ಈ‌ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ತಹಶಿಲ್ದಾರ್ ರೇಹಾನ್ ಪಾಷ, ಈ ಗ್ರಾಮದಲ್ಲಿ ‌ಸುಮಾರು ಇನ್ನೂರು ಮನೆಗಳು ಇದ್ದು, ಎರಡು ಸಮುದಾಯದ ಕುಟುಂಬಗಳು ವಾಸ ಮಾಡುತ್ತಿವೆ, ಪ್ರಮುಖ ರಸ್ತೆಯಿಂದ ವಾಸದ ಮನೆಗಳಿಗೆ ಹೋಗುವ ರಸ್ತೆ ಬಿಡಿಸಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿದ್ದರಿಂದ ಇಂದು ಎರಡು ಸಮುದಾಯದ ಮುಖಂಡರು, ಹಾಗೂ ಪಕ್ಕದ ಖಾಸಗಿ‌ ಜಮೀನು ಮಾಲೀಕರ ಸಮ್ಮುಖದಲ್ಲಿ ಖಾಸಗಿ ಜಮೀನು ಹಾಗೂ ಗ್ರಾಮ ಠಾಣೆ ನಕ್ಷೆಯ ಸರ್ವೆ ಅಧಿಕಾರಿಗಳ ನೇತೃತ್ವದಲ್ಲಿ ಅಳತೆ ಮಾಡಿ ಸರಕಾರಿ ಉಳಿಕೆ ಭೂಮಿಯಲ್ಲಿ ಸಾರ್ವಜನಿಕ ರಸ್ತೆಗೆ ಹಾಗೂ ಕುಡಿಯುವ ನೀರಿನ ಪೈಪ್ ಲೈನ್ ಗೆ ಜಾಗ ಬಿಡಿಸಿದೆ. ನಂತರದ ದಿನಗಳಲ್ಲಿ ಗ್ರಾಮ ಪಂಚಾಯತಿ ವತಿಯಿಂದ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದರು.

About The Author

Namma Challakere Local News
error: Content is protected !!