ಪಟ್ಟಣದ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಗೆ ಶುದ್ಧ ನೀರಿನ ಘಟಕ ಕೊಡುಗೆ ನೀಡಿದ ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ

ನಾಯಕನಹಟ್ಟಿ:: ಆಗಸ್ಟ್ 2 .
ನಾಯಕನಹಟ್ಟಿ ಹೋಬಳಿಯಲ್ಲಿ ಬಡತನ ಮೀರಿದ ಬದುಕು ಕಟ್ಟಿಕೊಳ್ಳಲು ಉತ್ತಮ ಶಿಕ್ಷಣ ನೀಡಿ ಎಂದು ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ.

ಶುಕ್ರವಾರ ಪಟ್ಟಣದ ಹೊರವಲಯದಲ್ಲಿ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ಶುದ್ಧ ನೀರಿನ ಘಟಕ ಕೊಡುಗೆ ನೀಡಿ ಲೋಕಾರ್ಪಣೆಗೊಳಿಸಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಮಕ್ಕಳಿಗೆ ಶಿಕ್ಷಣದ ಜೊತೆಯಲಿ ಸಿಸ್ತು ಮತ್ತು ಸಂಸ್ಕಾರವನ್ನ ಕಲಿಸಿ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಯಲ್ಲಿ ಉತ್ತಮ ಸಂಸ್ಕಾರ ಕಲಿಸಬೇಕು ಎಂದರು. ನನ್ನ ಎರಡು ವರ್ಷದ ಆಡಳಿತ ಅವಧಿಯಲ್ಲಿ ದಿನ ಶಾಸಕರುಗಳು ಮತ್ತು ಮತ್ತು ಜನಪ್ರತಿನಿಧಿಗಳು ಪೂರ್ಣ ಪ್ರಮಾಣದಲ್ಲಿ ಸಹಕರಿಸಿದರು ಕೆಲವು ಶಾಲೆಗಳನ್ನು ಪದವೀಧರ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡಲು ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಚಿತ ಪಟ್ಟಿಯ ಒದಗಿಸಲು ಹಲವು ದಾನಿಗಳು ಕಾರಣರಾದರು ಇದರಿಂದ ಚಳ್ಳಕೆರೆ ತಾಲೂಕಿನ ಫಲಿತಾಂಶ ರಾಜ್ಯಕ್ಕೆ ಮಾದರಿ ಆಗಲು ಕಾರಣವಾಯಿತು ತಾಲೂಕಿನ ಎಲ್ಲ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕಾರ್ಯಕ್ಕೆ ಕೈಜೋಡಿಸಿದರು ಇವರೆಲ್ಲರಿಗೂ ಅಭಿನಂದನೆಗಳು ಸಮಾಜ ಸೇವೆ ಮಾಡಲು ಅಧಿಕಾರ ಬೇಕಾಗಿಲ್ಲ ಮಾಡುವ ಮನಸ್ಸಿದ್ದರೆ ಸಾಕು ಈ ಅವಧಿಯಲ್ಲಿ ಸಹಕರಿಸಿದ ಸಾರ್ವಜನಿಕರ ಸಹಕಾರ ಅನನ್ಯವಾದಂತದ್ದು ಎಂದರು

ಇನ್ನೂ ಶ್ರೀ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತನಹಟ್ಟಿ ಗೌಡ್ರು ಮಾತನಾಡಿದರು ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ ಸಾಮಾಜಿಕ ಕಳಕಳೆ ಉಳ್ಳ ವ್ಯಕ್ತಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುವ ಮೂಲಕ ಈ ಹಿಂದೆ ಚಳ್ಳಕೆರೆ ತಹಶೀಲ್ದರಾಗಿ ಕೆಲಸ ಮಾಡುವ ವೇಳೆ ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಸ್ಪಂದಿಸುವ ಮೂಲಕ ಸಮಸ್ಯೆ ಮುಕ್ತ ಗ್ರಾಮ ಮಹಾಮಾರಿ ಕರೋನಾ ಕೋವಿಡ್ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ.
ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಸ್ಪರ್ಧಾತ್ಮಕ ಕೋರ್ಸ್ ಗಳಿಗೆ ಸುಮಾರು ಒಂದು ಸಾವಿರ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನ ಕುಡಿಸುವ ಮೂಲಕ ಸಾಮಾಜಿಕ ಮತ್ತು ಆರ್ಥಿಕವಾಗಿ ವಿದ್ಯಾರ್ಥಿಗಳಿಗೆ ಅನುಕೂಲವನ್ನು ಕಲ್ಪಿಸಿದ್ದಾರೆ. ಈ ದಿನ ಡಾನ್ ಬಾಸ್ಕೋ ಶಾಲೆಗೆ ಉಚಿತವಾಗಿ ಶುದ್ಧ ನೀರಿನ ಉಪಕರಣವನ್ನು ನೀಡಿರುವುದು ಶ್ಲಾಘನಿಯಾ ಎಂದರು.

ಇನ್ನೂ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲಾ ಸಂಸ್ಥೆಯಿಂದ ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ ರವರಿಗೆ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಹೋಬಳಿ ನೀರಾವರಿ ಸಾಮಾಜಿಕ ಹೋರಾಟ ಸಮಿತಿ ಅಧ್ಯಕ್ಷ ಜಿ ಬಿ ಮುದಿಯಪ್ಪ, ಗಜ್ಜುಗಾನಹಳ್ಳಿ ಜಿ ಎಸ್. ತಿಪ್ಪೇಸ್ವಾಮಿ, ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಎಸ್ ಟಿ ಬೋರ ಸ್ವಾಮಿ , ಆಡಳಿತ ಅಧಿಕಾರಿ ಎಚ್ ಎನ್ ಉಮಾ, ಮುಖ್ಯ ಶಿಕ್ಷಕ ಟಿ. ಪಾಲಯ್ಯ,ಶಿಕ್ಷಕರಾದ ಸಿ.ಆರ್ .ರಂಗನಾಥ್ ಸ್ವಾಮಿ, ಟಿ.ಎಲ್ಲಪ್ಪ, ರೆಹೇನುಮ,ಅಸ್ಮ ಇ ಹುಸ್ನ, ಬಿ.ಬಿ. ಅಮೀನಾ, ನಲಗೇತನಹಟ್ಟಿ ರುದ್ರಮ್ಮ, ಜಯಲಕ್ಷ್ಮಿ, ಶೃತಿ ,ಸಿ ಬಿ. ಬೋರಣ್ಣ, ಮಂಗಳ, ಶಶಿಕಲಾ, ಕೀರ್ತಿ,ಇನ್ನೂ ಉಪಸ್ಥಿತರಿದ್ದರು

Namma Challakere Local News
error: Content is protected !!