ಚಳ್ಳಕೆರೆ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕಾಗಿ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ಮೋಹನ್‌ದಾಸ್ ನೀಡಿರುವ ವರದಿಯನ್ನು ಕೂಡಲೆ ಜಾರಿಗೊಳಿಸಲು ಆಗ್ರಹಿಸಿ,
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳ 100 ನೇ ದಿನದ ಅಹೋರಾತ್ರಿ ಧರಣಿಯ
ಬೆಂಬಲಿಸಿ ಚಳ್ಳಕೆರೆ ನಗರದಲ್ಲಿ ಈ ನಾಡು ಹಿಂದೆಂದೂ ಕಂಡರಿಯದ
ಬೃಹತ್ ಹೋರಾಟಕ್ಕೆ ತಾಲೂಕಿನ ಸಮಸ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ
ಮುಖಂಡರು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ, ಜೊತೆಗೆ ನಾಗರೀಕರು
ಈ ಪ್ರತಿಭಟನಾ ಹೋರಾಟದಲ್ಲಿ ಸಾಕ್ಷಿಯಾಗಿದ್ದರು.
ಚಳ್ಳಕೆರೆಯ ಚಿತ್ರದುರ್ಗ ರಸ್ತೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ
ಡಾ। ಜಗಜೀವನರಾಂ ಪ್ರತಿಮೆ ಮುಂಭಾಗದಿಂದ ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ,ಹಾಗೂ ಶ್ರೀ ವೀರಭದ್ರಸ್ವಾಮಿ ದೇವಾಲಯದ ರಾಜಾ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ,ಜೈಕಾರ ಮೊಳಗಿಸುತ್ತಾ ಮೀಸಲಾತಿ ಹೋರಾಟಕ್ಕೆ ಬೆಂಬಲಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟಕ್ಕೆ ಇಂದು ಬೃಹತ್ ಪ್ರತಿಭಟನೆಯ ಮೂಲಕ ಚಳ್ಳಕೆರೆ ನಗರವನ್ನು ಸ್ವಯಂ ಘೋಷಿತ ಬಂದ್ ಮಾಡಲಾಗಿತ್ತು..
ಮೀಸಲಾತಿ ಹೋರಾಟದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಜೆಡಿಎಸ್ ನಿಯೋಜಿತ ಅಭ್ಯರ್ಥಿ ಎಂ.ರವೀಶ್ ಕುಮಾರ್, ಪಕ್ಷತೇರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ
ರೈತ ಮುಖಂಡ ಕೆಮಪಿ.ಭೂತಯ್ಯ, ಜನಪ್ರತಿನಿಧಿಗಳು ಇತರ ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.