ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಧಾರಕಾರ ಸುರಿದ ಮಳೆ ಹಿನ್ನೆಲೆ, ಮುಂಗಾರು ಪ್ರಾರಂಭದಲ್ಲಿಯೇ
ಕೋಡಿ ಬಿದ್ದ ಚಿಕ್ಕ ಮಧುರೆ ಕೆರೆ.
ಹೌದು …ಬರದ ನಾಡಲ್ಲಿ ಕಳೆದ ವಾರದಿಂದ ಅಬ್ಬರಿಸುತ್ತಿರುವ ವರುಣ ದೇವನ ಕೇಪೆಯಿಂದ ಚಿಕ್ಕ ಮದುರೆ ಕೆರೆ ಕೊಡಿ ಬಿದ್ದು ನೀರು ತುಂಬಿ ಹೊರ ಹೋಗುತ್ತಿವೆ, ಕೆರೆ ತುಂಬಿದ್ದರಿಂದ ಸುತ್ತಮುತ್ತಲಿನ ಗ್ರಾಮದ ರೈತರಲ್ಲಿ ಸಂತಸ ಮನೆ ಮಾಡಿದೆ,
ಜಿಲ್ಲೆಯ ಹಲವೆಡೆ ಧಾರಕಾರವಾಗಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಗ್ರಾಮಗಳ ಹಲವು ಕೊಳವೆ ಬಾವಿಗಳಲ್ಲಿ ನೀರು ಚಿಮ್ಮುತ್ತಿವೆ, ಅದರಂತೆ ಕೂನಬೇವು ಗ್ರಾಮದ ಕೊಳವೆ ಬೋರ್ವೆಲ್ ಗಳಲ್ಲಿ ಹೊರ ಚಿಮ್ಮಿದ ಅಂತರ್ಜಲ.
ಮೋಟರ್ ಪಂಪ್ ಚಾಲನೆ ಇಲ್ಲದೆ ಬೋರ್ವೆಲ್ಗಳಲ್ಲಿ ಜಲಧಾರೆ ಹರಿದು ಬರುತ್ತಿವೆ, ಅದರಂತೆ
ಹಿರೆಕೆರೆ ಕಾವಲ್ ಚೆಕ್ ಡ್ಯಾಂ, ತುಂಬಿ ಹರಿಯುತ್ತಿವೆ.
ಚಿತ್ರದುರ್ಗ ತಾಲ್ಲೂಕಿನ ಕೂನಬೆವು ಗ್ರಾಮದಲ್ಲಿ ರೈತರ ಖುಷಿಯೋ ಖುಷಿ ಪಟ್ಟಿದ್ದಾರೆ. ನಿರಂತರ ಬರ ಅನುಭವಿಸಿದ್ದ ಜಿಲ್ಲೆಗೆ ಸಂತಸ ನೀಡಿರೋ ಮಳೆರಾಯ.
ಕೆರೆಗಳು ತುಂಬಿ ಅಂತರ್ಜಲ ಮಟ್ಟ ಹೆಚ್ಚಿದ್ದು ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.