ಗೌಡಗೆರೆ ಗ್ರಾಮದಲ್ಲಿ ಹೋಳಿಗಮ್ಮ ದೇವಿ ಹಬ್ಬ ಸಂಭ್ರಮಾಚರಣೆ ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಟಿ ರಂಗಪ್ಪ.
ನಾಯಕನಹಟ್ಟಿ:: ಜುಲೈ 30. ನಮ್ಮ ಪೂರ್ವಕರ ಕಾಲದಿಂದಲೂ ಹೋಳಿಗಮ್ಮ ದೇವಿ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದೇವೆ ಎಂದು ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಟಿ ರಂಗಪ್ಪ ಹೇಳಿದ್ದಾರೆ.
ಮಂಗಳವಾರ ಗೌಡಗೆರೆ ಗ್ರಾಮದ ಶ್ರೀ ದೊಡ್ಲು ಮಾರಮ್ಮ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ಆಚರಿಸುವ ಹೋಳಿಗಮ್ಮ ದೇವಿ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗ್ರಾಮದಲ್ಲಿ ಪೂರ್ವಿಕರ ಕಾಲದಿಂದಲೂ ಹೋಳಿಗೆಮ್ಮ ಅಜ್ಜಿ ಹಬ್ಬವನ್ನು ಪ್ರತಿ ವರ್ಷ ಆಷಾಢ ಮಾಸದಲ್ಲಿ ಸಂಪ್ರದಾಯದಂತೆ ಆಚರಣೆ ಮಾಡಲಾಗುತ್ತದೆ ಈ ಭಾಗದಲ್ಲಿ ಉತ್ತಮ ಮಳೆ ಬೆಳೆ ಆಗಲಿ ಎಂದು ಹೋಳಿಗಮ್ಮ ಹಬ್ಬವನ್ನು ಆಚರಣೆ ಮಾಡಲಾಗುವುದು ಎಂದರು.
ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ. ಮಂಜುನಾಥ್ ಮಾತನಾಡಿದರು. ನಮ್ಮ ಗೌಡಗೆರೆ ಗ್ರಾಮದಲ್ಲಿ ಪ್ರತಿ ವರ್ಷ ಸಂಪ್ರದಾಯದಂತೆ ಹೋಳಿಗೊಮ್ಮೆ ಆಚರಣೆ ಮಾಡಲಾಗಿದೆ. ಹೋಳಿಗಮ್ಮ ದೇವಿಯ ಹಬ್ಬವನ್ನು ಮಾಡುವ ಉದ್ದೇಶ ಇಷ್ಟೇ ಗ್ರಾಮದಲ್ಲಿ ಉತ್ತಮ ಮಳೆ ಬೆಳೆ ರೈತರಿಗೆ ಸಮೃದ್ಧಿ ಬೆಳೆಯನ್ನು ಬೆಳೆದು ಗ್ರಾಮದಲ್ಲಿ ಎಲ್ಲಾ ಸಮುದಾಯದವರು ಜೊತೆ ಸೌಹಾರ್ದತೆಯಿಂದ ಹಬ್ಬವನ್ನು ಆಚರಣೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪಿ. ಟಿ. ಪರಮೇಶ್ ಪೂಜಾರ್, ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಶಾಂತಮ್ಮ, ಗಿಣಿಯರ್ ತಿಪ್ಪೇಶ್, ಅನ್ನಪೂರ್ಣೇಶ್ವರಿ, ಮಂಜಮ್ಮ, ಗ್ರಾಮಸ್ಥರಾದ ಬಿ .ಇ. ಬಂಗಾರಪ್ಪ ,ಜಯಣ್ಣ, ಹಾಗೂ ಸಮಸ್ತ ಗೌಡಗೆರೆ ಗ್ರಾಮಸ್ಥರು ಇದ್ದರು