ಚಳ್ಳಕೆರೆ : ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾ ಚಾರ್ಯರಾದ ಎಮ್ ರವೀಶ್ ನಿವೃತ್ತಿ ಬಿಳ್ಕೊಡುಗೆ ಸಮಾರಂಭ
ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ್ ಮಾತನಾಡಿ, ರವೀಶ್ ಅವರು ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಉಪನ್ಯಾಸಕರ ಉತ್ತಮ ಬಾಂಧವ್ಯವನ್ನು ಸಹ ಹೊಂದಿದ್ದರು.
ನಾವುಗಳು ಸೇವೆಯ ನಿವೃತ್ತಿ ನಂತರ ಪ್ರವೃತಿಯನ್ನು ಬೆಳೆಸಿಕೊಂಡು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿ ನಿವೃತ್ತಿಯಾಗಿದ್ದೇವೆ ಎಂಬ ಆತಂಕ ನಮ್ಮಲ್ಲಿ ಇರಬಾರದು
ಈ ನಿಟ್ಟಿನಲ್ಲಿ ಎಂ. ರವೀಶ್ ರವರು ಯಾವಾಗಲೂ ಹಸನ್ಮುಖಿಯಾಗಿರುತ್ತಾರೆ ಅವರು ಉತ್ತಮ ಕಲಾವಿದರು ಸಹ ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸುತ್ತೇನೆ ಎಂದರು.