ಚಳ್ಳಕೆರೆ :
ನೊಂದವರ ನೋವು ನಿವಾರಿಸುವುದು ನಿಜವಾದ ಸೇವೆ
ವೇತನ ಪಡೆದು ತಮ್ಮ ವೃತ್ತಿಯನ್ನು ಪ್ರಾಮಾಣಿಕತೆಯಿಂದ
ಮಾಡಬಹುದು ಸೇವೆ ಅಲ್ಲ.
ಸೇವೆ ಎಂದರೆ ಯಾವುದೇ
ಫಲಪೇಕ್ಷೆ ಇಲ್ಲದೆ ತನು ಮನ, ಧನ, ವಿವೇಕದಿಂದ ಮತ್ತೊಬ್ಬರಿಗೆ
ಸಹಾಯ ಮಾಡುವುದು ನೊಂದವರ ನೋವು ನಿವಾರಿಸುವುದು
ನಿಜವಾದ ಸೇವೆ ಎಂದು ಸಾಣೆ ಹಳ್ಳಿ ಮಠದ ಪಂಡಿತಾರಾಧ್ಯ
ಶ್ರೀಗಳು ಹೇಳಿದರು.
ಶ್ರೀಮಠದಲ್ಲಿ ನಡೆದ ಒಲಿದಂತೆ ಹಾಡುವೆ
ಕಾರ್ಯಕ್ರಮದಲ್ಲಿ ಮಾತನಾಡಿ, ಆತ್ಮ ಕಲ್ಯಾಣ ಮತ್ತು
ಲೋಕ ಕಲ್ಯಾಣ ಸಾಧಿತವಾಗಬೇಕು. ಪರೋಪಕಾರಿ ಬುದ್ಧಿ
ಯುಳ್ಳವಾಗಬೇಕು.
ಸೇವೆಯಲ್ಲಿ ಸ್ವಾರ್ಥ ಹೆಡೆಯಬಾರದು
ಎಂದರು.