ಚಳ್ಳಕೆರೆ :
ಶೇಂಗಾ ಬೆಳೆಗೆ ಎಲೆ ಚುಕ್ಕಿ ರೋಗ ಆತಂಕದಲ್ಲಿ ರೈತರು
ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದ
ಕಾರಣ ಹಲವಾರು ರೈತರು ಶೇಂಗಾ ಬೀಜ ಬಿತ್ತನೆ ಮಾಡಲಾಗಿತ್ತು.
ಈಗ ರೈತರು ಎಡೆ ಕುಂಟೆ ಹೊಡೆದು ಕಳೆ ತೆಗೆಯುತ್ತಿದ್ದಾರೆ. ಆದರೆ
ಶೇಂಗಾ ಬೆಳೆಗೆ ಎಲೆಚುಕ್ಕಿ ರೋಗ ಹಾಗೂ ಎಲೆ ತೂತ ರೋಗ
ಕಾಣಿಸಿಕೊಂಡಿದ್ದು ಶೇಂಗಾ ಬಿತ್ತನೆ ಮಾಡಿದ ರೈತರಲ್ಲಿ ಆತಂಕ
ಶುರುವಾಗಿದೆ.
ಈ ಬಾರಿಯಾದರೂ ಶೇಂಗಾ ಬೆಳೆ ಚೆನ್ನಾಗಿ
ಬರುತ್ತೆ ಎನ್ನುವ ಆಶಯದಿಂದ ಕಷ್ಟಪಟ್ಟಾದರೂ ಶೇಂಗಾ ಬಿತ್ತನೆ
ಮಾಡಿದ್ದಾರೆ.
ಆದರೆ ಹೂವು ಕಟ್ಟುವ ಹಂತದಲ್ಲಿ ರೋಗದ ಭಾದೆ
ಕಾಡುತ್ತಿದೆ.