ಚಳ್ಳಕೆರೆ :
ಸರ್ಕಾರಿ ಕೆಲಸಕ್ಕೆ ಡಿಸಿಗೆ ಅರ್ಜಿ ನೀಡಿದ
ರೇಣುಕಾಸ್ವಾಮಿ ಪೋಷಕರು
ದರ್ಶನ್ ಅಂಡ್ ಗ್ಯಾಂಗ್ ನಿಂದ ಹತ್ಯೆಗೊಳಗಾದ ರೇಣುಕಾಸ್ವಾಮಿ
ಪೋಷಕರು, ಸರ್ಕಾರಿ ಕೆಲಸವನ್ನು ನೀಡುವಂತೆ ಮನವಿಯನ್ನು
ನೀಡಿದ್ದಾರೆಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.
ಅವರು
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು. ಖಾಯಂ
ಕೆಲಸ ಕೊಡುವಂತೆ ಮನವಿಮಾಡಿದ್ದು, ಅದು ನಮ್ಮಹಂತದಲ್ಲಿ ಇಲ್ಲ
ಎಂದು ಹೇಳಿ, ಅರ್ಜಿಯ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿದ್ದೇವೆ
ಎಂದು ತಿಳಿಸಿದರು.