ಚಳ್ಳಕೆರೆ :
ತೆಜೋವಧೆ ಮಾಡಲೆಂದೆ ನಮ್ಮ ಮೇಲೆ ಆರೋಪ
ಮಾಡುತ್ತಿದ್ದಾರೆ
ಚಿತ್ರದುರ್ಗ ಟೌನ್ ಕ್ಲಬ್ ನ ಕೆಲ ಸದಸ್ಯರು ಮನಸ್ಸಿಗೆ ನೋವು
ಕೊಡುವ ಉದ್ದೇಶದಿಂದಲೇ ಸುಳ್ಳು ಆರೋಪ ಮಾಡುತ್ತಿದ್ದಾರೆಂದು
ಕ್ಲಬ್ ನ ಅಧ್ಯಕ್ಷ ಚಿತ್ರಲಿಂಗಪ್ಪ ಹೇಳಿದರು.
ಅವರು ಚಿತ್ರದುರ್ಗದಲ್ಲಿ
ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ನಮಗೆ ಒಂದು ಸಾವಿರ
ಸದಸ್ಯತ್ವ ಪಡೆಯಲು ಅವಕಾಶವಿದೆ. ಇದನ್ನು ಸಹಕಾರ
ಸೊಸೈಟಿಯಿಂದಲೇ ನಿಯಮವಿದೆ. ಆದ್ದರಿಂದ ನಾವು
ತೆಗೆದುಕೊಂಡಿದ್ದೇವೆ.
ಆದರೆ ವಿಷಯ ತಿಳಿಯದೇನೆ ಆರೋಪ
ಮಾಡುತ್ತಿದ್ದಾರೆ ಎಂದರು.