ಚಳ್ಳಕೆರೆ :
ನಗರದ ವಾಲ್ಮೀಕಿ ನಗರ, ವಿಠ್ಠಲ ನಗರ ಈಗೇ ವಿವಿಧ ಕಡೆಗಳಲ್ಲಿ ಸಡಗರದಿಂದ ಜರುಗಿದ
ಹೋಳಿಗೆಮ್ಮ ಹಬ್ಬ
ಪ್ರತಿ ಮನೆಗಳಲ್ಲಿ ನೆಲಕರಣೆ ಮಾಡಿ, ಒಂದೊತ್ತು ಉಪವಾಸದ
ಪದ್ಧತಿಯಂತೆ ಸಿಹಿ ಹೋಳಿಗೆ ಊಟ ತಯಾರಿಸಿ, ಹೊಸದಾಗಿ
ತಂದಿದ್ದ ಬಿದಿರು ಮೊರದಲ್ಲಿ ಹಣ್ಣು, ಹೂವು, ಕಾಯಿ, ಬಾಳೆ ಹಣ್ಣು,
ಹೋಳಿಗೆ ಊಟ ಇರಿಸಿಕೊಂಡು ಸಮೀಪದ ಮಾರಮ್ಮನ ಗುಡಿ
ಬಳಿ ಪೂಜೆ ಮಾಡಲಾಯಿತು.
ಬಳಿಕ ತಮಟೆ ವಾದ್ಯದೊಂದಿಗೆ
ಕೆಲವರು ಮಾರಮ್ಮನಿಗೆ ಸಮರ್ಪಿಸಿದ್ದ ಹೋಳಿಗೆ ಪದಾರ್ಥಗಳನ್ನು
ಬಿದಿರು ಬುಟ್ಟಿಯಲ್ಲಿ ತುಂಬಿಕೊಂಡು ನೆತ್ತಿಯ ಮೇಲೆ ಹೊತ್ತು ಜನ,
ಜಾನುವಾರುಗಳಿಗೆ ಯಾವುದೇ ರೋಗ ಭಾದೆ ಬಾರದಿರಲಿ ಎನ್ನುವ
ಉದ್ದೇಶದಿಂದ ಹಬ್ಬ ಆಚರಣೆ ಮಾಡಿದರು.