ಚಳ್ಳಕೆರೆ :
ಸರ್ಕಾರ ಕೂಡಲೇ ಬಗರ್ ಹುಕುಂ ಹಕ್ಕು ಪತ್ರ ನೀಡಲಿ
ಚಿತ್ರದುರ್ಗ ಬಗರ್ ಹುಕುಂ ಸಾಗುವಳಿದಾರರಿಗೆ ಸರ್ಕಾರ
ವಂಚಿಸಿಕೊಂಡು ಬರುತ್ತಿದೆ.
ಹೋರಾಟಗಳಿಗೆ ಬೆಲೆ ಇಲ್ಲದಂತೆ
ಮಾಡುತ್ತಿವೆ. ಇದರಿಂದ ಹಕ್ಕಪತ್ರಗಳಿಗಾಗಿ ಹೋರಾಟವನ್ನು
ತೀವ್ರಗೊಳಿಸಬೇಕೆಂದು ಭೂಮಿ ಮತ್ತು ವಸತಿ ಹಕ್ಕು ಹೋರಾಟ
ಸಮಿತಿ ಮುಖಂಡ ಪ್ರಕಾಶ್ ಮೂರ್ತಿ ಹೇಳಿದರು.
ಅವರು
ಚಿತ್ರದುರ್ಗದಲ್ಲಿ ಪ್ರತಿಭಟನೆಯಲ್ಲಿ ಮಾತಾಡಿದರು. 30
ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಹಕ್ಕು ಪತ್ರ ಕೊಟ್ಟಿಲ್ಲ.
ರೈತರ ಜೀವನ ಬೀದಿಗೆ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.