ರಸ್ತೆ ದಾಟುವಾಗ ಅಪರಿಚಿತ ವಾಹನಕ್ಕೆ ಡಿಕ್ಕಿ ಓರ್ವ ಸಾವು

ಪತ್ನಿ ಮಕ್ಕಳ ಮುಂದೆ ತಂದೆಯ ಘೋರ ಅಪಘಾತ

ಚಳ್ಳಕೆರೆ : ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವಾಹನ ನಿಲ್ಲಿಸಿ ರಸ್ತೆ ದಾಟುವಾಗ ಅಪರಿಚತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿ ಯಾದಗಿರಿ ಮೂಲದ ಸಿದ್ದರಾಮಯ್ಯ ಸಾವನಪ್ಪಿರುವ ಘಟನೆ ಜರುಗಿದೆ.

ಯಾದಗಿರಿ ಮೂಲದ ಕೂಲಿ‌ ಕಾರ್ಮಿಕರು ಬೆಂಗಳೂರು ನಗರದಿಂದ ವಾಪಸ್ಸು ತಮ್ಮ ಊರಿಗೆ ತೆರಳುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.

ಇನ್ನೂ ಬೆಂಗಳೂರು ನಿಂದ ತಮ್ಮ ಸ್ವ ಗ್ರಾಮಕ್ಕೆ ಯಾದಗಿರಿಗೆ ತರಳುತ್ತಿರುವಾಗ ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಸಮೀಪದ ತಮ್ಮ ಟಾಟಾಎಸಿ ವಾಹನ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಮೂತ್ರ ವರ್ಸಜನೆಗೆಂದು ರಸ್ತೆ ದಾಟುವಾಗ ಯಾವುದೋ ಅಪರಿಚಿತ ವಾಹನ‌ ಡಿಕ್ಕಿ ಒಡೆದು ಸ್ಥಳದಲ್ಲಿ ಸಾವನ್ನಪ್ಪಿದಾರೆ.

ಇನ್ನೂ ಬೆಂಗಳೂರು ನಿಂದ ತಮ್ಮ ಪತ್ನಿ ಹನುಮಂತಿ ಹಾಗೂ ನಾಲ್ಕು ಜನ ಮಕ್ಕಳು ಟಾಟಾಎಸಿ ವಾಹನದಲ್ಲಿ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೂ ಸ್ಥಳಕ್ಕೆ ಡಿವೈಎಸ್ ಪಿ ಬಿಟಿ.ರಾಜಣ್ಣ ಬೇಟಿ ನೀಡಿ ಮೃತ ಕುಟುಂಬಸ್ಥರಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Namma Challakere Local News
error: Content is protected !!