ಚಳ್ಳಕೆರೆ :
ಚಳ್ಳಕೆರೆ ತಾಲ್ಲೂಕಿನ ಬುಡ್ನಹಟ್ಟಿ ಗ್ರಾಮದ ಪರಮೇಶ.ಬಿ
ಇವರಿಗೆ ಮೈಸೂರು
ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ (Doctor of Philosophy ) ಪದವಿ ಘೋಷಣೆ ಮಾಡಿದೆ.
ಇವರು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ|| ಜಿ.ಕರಿಯಪ್ಪ ಅವರ ಮಾರ್ಗದರ್ಶನದಲ್ಲಿ ಪರಮೇಶ .ಬಿ ಅವರು ಸಿದ್ಧಪಡಿಸಿದ “ಹರಿಹರ ತಾಲ್ಲೂಕಿನ ದೇವಾಲಯಗಳ ಕಲೆ ಮತ್ತು ವಾಸ್ತುಶಿಲ್ಪ ಒಂದು ಸಾಂಸ್ಕೃತಿಕ ಅಧ್ಯಯನ” ಎಂಬ
ಮಹಾಪುಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಪಿ.ಹೆಚ್.ಡಿ (Ph,D) ಪದವಿಯನ್ನು ನೀಡಿ ಗೌರವಿಸಿದೆ.