ಚಳ್ಳಕೆರೆ :
ಪತ್ರಕರ್ತರ ಸಂಘದ ಕಟ್ಟಡಕ್ಕೆ 5 ಲಕ್ಷ ಅನುದಾನ
ನೀಡಿದ ಎಂಎಲ್ ಸಿ ನವೀನ್
ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ
ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಯೋಗದಲ್ಲಿ, ಪತ್ರಿಕಾ
ದಿನಾಚರಣೆಯನ್ನು ಜಿಲ್ಲಾ ಪಂಚಾಯಿತಿ ಸಂಭಾಂಗಣದಲ್ಲಿ
ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತಾಡಿದ ವಿಧಾನ
ಪರಿಷತ್ ಸದಸ್ಯ ಕೆ ಎಸ್ ನವೀನ್, ಪತ್ರಕರ್ತರ ಸಂಘದ ಕಟ್ಟಡ
ಹಾಗೂ ಪತ್ರಕರ್ತರ ಸಂಘದಲ್ಲಿ ಕುಳಿತು ಕೆಲಸ ಮಾಡಲು
ಅಗತ್ಯವಿರುವ ಪಿಠೋಪಕರಣಕ್ಕಾಗಿ 5 ಲಕ್ಷ ಅನುದಾನವನ್ನು
ನೀಡಿದರು.
ಇದನ್ನು ಸಂಘದ ಪೂರಕ ಬೆಳವಣಿಗೆಗೆ
ಬಳಸಿಕೊಳ್ಳುವಂತೆ ತಿಳಿಸಿದರು.