ಚಳ್ಳಕೆರೆ : ಸಮಾಜದ ಆಸ್ತಿಯನ್ನು ಸಮಾಜದ
ಉಪಯೋಗಕ್ಕಾಗಿ ಮೀಸಲಗಾಬೇಕು ಯಾವುದೇ ಬಲಿಷ್ಠ ಒಂದು
ಕುಟುಂಬಕ್ಕೆ ಸೀಮಿತವಾಗ ಬಾರದು
ಆದ್ದರಿಂದ ಮುಂದಿನ ಭಾನುವಾರ ಆದಿ
ಕರ್ನಾಟಕ ವಸತಿ ನಿಲಯದ ಜಾಗದಲ್ಲಿ ಸಭೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾದಿಗರ ಸಾಂಸ್ಕೃತಿಕ ಸಂಘ, ಸಾಮಾಜಿಕ ಸಂಘರ್ಷ ಸಮಿತಿಯ ಎಂ.ಮಲ್ಲಿಕಾರ್ಜುನ ಮನವಿ ಮಾಡಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಸಮಾಜದ ಆಸ್ತಿಯನ್ನು ಉಳಿಸಲು ಪ್ರತಿ ತಾಲೂಕಿನಲ್ಲಿ ಸಮಾಜದ ಆಸ್ತಿ
ಉಳಿವಿಗಾಗಿ ಸಂಘಟನೆ ಮಾಡಲಾಗುವುದು
ಮಾದಿಗ ಸಮುದಾಯದ
ಮೀಸಲು ಪಡೆದವರೇ ಇಂದು ಸಮುದಾಯದ ಆಸ್ತಿ ಕಬಳಿಸಲು
ಮುಂದಾಗಿದ್ದಾರೆ ಇಡೀ ಜಿಲ್ಲೆಯ ಮಾದಿಗ ಸಮುದಾಯದ ಪರವಾಗಿ
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಹಾಗೂ
ಜಿಲ್ಲಾಧಿಕಾರಿಗಳವರಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು
ಸಮುದಾಯದ ಹೆಸರಿಗೆ ಇರುವ ಜಾಗವನ್ನು ವೈಯಕ್ತಿಕವಾಗಿ ಕುಟುಂಬದ ಹಿತಾಸಕ್ತಿಗೆ ಕಸ್ತೂರಬಾ ಸಂಘಕ್ಕೆ ಸುಮಾರು ಎರಡು ಎಕರೆ ಜಾಗವನ್ನು ಇತ್ತಿಚಿನ ದಿನಗಳಲ್ಲಿ ಮಾಡಿಸಿಕೊಂಡಿರುವುದು ದಿ.ಜಿ.ದುಗ್ಗಪ್ಪನವರ ಕುಟುಂಬಕ್ಕೆ ಸೇರಿದ ಕೆಲ ವ್ಯಕ್ತಿಗಳು ಈ ಜನಾಂಗದವರಿಗಾಗಿ ಯಾವುದೇ ವಾಣಿಜ್ಯ ಸಂಕೀರ್ಣ,
ಸಮುದಾಯ ಭವನವನ್ನು ನಿರ್ಮಿಸದೇ ತಮ್ಮ ಕುಟುಂಬದ ಸ್ವಾರ್ಥದ
ಹಿತಕ್ಕಾಗಿ 1974-75ನೇ ಸಾಲಿನಲ್ಲಿ ಈ ಜನಾಂಗಕ್ಕೆ ಸೇರಿದ ಆದಿ
ಕರ್ನಾಟಕ ಹಾಸ್ಟೆಲ್ ಜಾಗದಲ್ಲಿ ಶ್ರೀ ಕಸ್ತೂರಿ ಬಾ ವಿದ್ಯಾಭಿವೃದ್ಧಿ
ಸಂಸ್ಥೆಯನ್ನು ನೋಂದಾಯಿಸಿಕೊಂಡು ಕೆಲವು ವರ್ಷಗಳ ಕಾಲ
ಹಾಸ್ಟೆಲ್‌ನ್ನು ನಡೆಸಿ ಸರ್ಕಾರದಿಂದ ಲಕ್ಷಾಂತರ ರೂ.ಗಳ ಕಟ್ಟಡ
ನಿರ್ಮಾಣಕ್ಕಾಗಿ ಅನುದಾನವನ್ನು ಪಡೆದು ಕಾಲ ಕ್ರಮೇಣ ಸಂಸ್ಥೆಯನ್ನು
ನಡೆಸದೆ ನಿಲ್ಲಿಸಿದ್ದರಿಂದ ಈಗ ಸದರಿ ಪ್ರದೇಶವು ವಿಷಜಂತುಗಳ
ತಾಣವಾಗಿರುತ್ತೆ.
ಆದರೆ ಕಸೂರಿ ಬಾ ವಿದ್ಯಾಭಿವೃದ್ಧಿ ಸಂಸ್ಥೆಯ ಗೌರವ
ಕಾರ್ಯದಶಿಯವರಾದ ಡಾ: ಜಿ.ಡಿ.ರಾಘವನ್‌ರವರು ತಮ್ಮ ರಾಜಕೀಯ
ಬೆಂಬಲ, ಹಣಬೆಂಬಲ ಮತ್ತು ಮಾಜಿ ಸಚಿವರ ಬೆಂಬಲ ಪಡೆದು
“ಆದಿಕರ್ನಾಟಕ ಹಾಸ್ಟೆಲ್ ಹೆಸರಿನ ಆಸ್ತಿಯನ್ನು ತಮ್ಮ ವಿದ್ಯಾಸಂಸ್ಥೆಯ
ಹೆಸರಿಗೆ ಸಂಪೂರ್ಣವಾಗಿ ವರ್ಗಾಯಿಸಿಕೊಂಡಿದ್ದಾರೆ.
ಈ ಜನಾಂಗದ ಮುಖಂಡರು ಚಿತ್ರದುರ್ಗ ನಗರಸಭೆ ಆಯುಕ್ತರಲ್ಲಿ
ಮುಕ್ತ ಹಾಗೂ ಮೂಲ ದಾಖಲಾತಿಗಳೊಂದಿಗೆ ಚರ್ಚಿಸಿ ವಾಸ್ತವ
ಪರಿಸ್ಥಿತಿಯನ್ನು ಮನವರಿಕೆ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ
ಪುನಃ ಸದರಿ ಆಸ್ತಿಯ ಖಾತೆಯನ್ನು “ಆದಿಕರ್ನಾಟಕ ಹಾಸ್ಟೆಲ್” ಹೆಸರಿಗೆ
ಮರು ಖಾತೆ ಮಾಡಿದ್ದು, ವಿದ್ಯಾಸಂಸ್ಥೆಯ ಮಂಡಳಿಗೆ ಹಿನ್ನೆಡೆ
ಉಂಟಾಗಿದ್ದರಿಂದ ಮಾಜಿ ಸಚಿವರೊಂದಿಗೆ ಷಾಮೀಲಾಗಿ ಮತ್ತು ಸಂಘ
ಸಂಸ್ಥೆಯ ಬಗ್ಗೆ ಕನಿಷ್ಠ ಪ್ರಾಥಮಿಕ ಜ್ಞಾನವಿಲ್ಲದ ತನ್ನ ಸಹಚರರು
ಆಪ್ತರನ್ನು ಸೇರಿಸಿಕೊಂಡು 9 ಜನ ಸಮಿತಿಯನ್ನು ರಚನೆ ಮಾಡಿಕೊಂಡು
ಅವೈಜ್ಞಾನಿಕಾಗಿ ಹಾಗೂ ಅಕ್ರಮವಾಗಿ ಈ ಜನಾಂಗದ ಆಸ್ತಿಯನ್ನು
ಕಬಳಿಸುವ ದೃಷ್ಟಿಯಿಂದ ಸಮಿತಿಯನ್ನು ರಚಿಸಿಕೊಂಡಿರುವುದು
ಕಂಡುಬರುತ್ತದೆ.
ಈ ನೊಂದಣಿ ಪ್ರಕ್ರಿಯೆಯಲ್ಲಿ ಒಂದೇ ದಿನಕ್ಕೆ
ನೋಂದಣಿ ಮಾಡಿಕೊಟ್ಟಿರುವುದು ಉಪ ನಿಬಂಧಕರ
ಸಂಘಸಂಸ್ಥೆಗಳ ನೋಂದಣಾಧಿಕಾರಿಗಳವರ ಕೈವಾಡ ಹಾಗೂ
ರಾಜಕೀಯ ವ್ಯಕ್ತಿಗಳ ಒತ್ತಡ ಇರುವುದು ಹಾಗೂ ಮಾಜಿ ಸಚಿವರ
ಒತ್ತಡಕ್ಕೆ ಬೆದರಿಕೆಗೆ ಈ ಕೃತ್ಯ ಎಸಗಿರುವುದಾಗಿ ಕಂಡುಬಂದಿರುತ್ತೆ.
ಪ್ರಯುಕ್ತ ಅವೈಜ್ಞಾನಿಕವಾಗಿ ಕಾರ್ಯಕಾರಿ ಮಂಡಳಿ ಒಬ್ಬ ಸದಸ್ಯರ ಸಹಿ
ಮತ್ತು ಸಾಕ್ಷಿಗಳ ಸಹಿ ಇಲ್ಲದೆ ಹಾಗೂ ಚಿತ್ರದುರ್ಗ ನಗರಸಭೆಯಲ್ಲಿ ಆದಿ
ಕರ್ನಾಟಕ ಹಾಸ್ಟೆಲ್ ಹೆಸರಿಗೆ ಮರು ವರ್ಗಾವಣೆ ಖಾತೆಯ ನಕಲು
ಪ್ರತಿಯನ್ನು ಅಕ್ರಮವಾಗಿ ಸಲ್ಲಿಸಿ ಮಾಡಿರುವ ನೋಂದಣಿಯನ್ನು ಈ
ಕೂಡಲೇ ರದ್ದುಪಡಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜನಾಂಗದ ಮುಖಂಡ ಸಿ.ಕೆ.ಮಹೇಶ್,
ಹನುಮಂತಪ್ಪ, ರವಿ, ಅಭಿಲಾಶ್ ಭಾಗವಹಿಸಿದ್ದರು.