ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರು ಪಿ.ಎಂ. ಸ್ವ ನಿಧಿ ಯೋಜನೆಯ ಸಾಲ ಸೌಲಭ್ಯವನ್ನು ಪಡೆದುಕೊಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಪಾಲಯ್ಯ.
ನಾಯಕನಹಟ್ಟಿ:: ಜುಲೈ 8. ಬೀದಿ ಬದಿ ವ್ಯಾಪಾರಸ್ಥರು ಸರ್ಕಾರದ ಯೋಜನೆಗಳ ಉಪಯೋಗ ಪಡೆದುಕೊಳ್ಳಬೇಕು. ಎಂದು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಪಾಲಯ್ಯ ಹೇಳಿದ್ದಾರೆ.
ಸೋಮವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ವತಿಯಿಂದ ಶ್ರೀ ಮಾನ್ವಿತಾ ಕಲಾತಂಡ ಚಿತ್ರದುರ್ಗ ರವರಿಂದ ಬೀದಿ ನಾಟಕ ಬೀದಿ ಬದಿ ವ್ಯಾಪಾರಸ್ಥರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಬೀದಿ ಬದಿಯ ವ್ಯಾಪಾರಿಗಳ ಅನುಕೂಲಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು.
ಬೀದಿಬದಿ ವ್ಯಾಪಾರಿಗಳು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ನೀಡಬೇಕು ಅಲ್ಲದೆ ತಾವು ವ್ಯಾಪಾರ ಮಾಡುವ ಸ್ಥಳದಲ್ಲಿ ಸ್ವಚ್ಛತೆಯನ್ನ ಕಾಪಾಡಿಕೊಳ್ಳಬೇಕು ಸಂಗ್ರಹವಾದ ಕಸವನ್ನು ಪಟ್ಟಣ ಪಂಚಾಯಿತಿ ಆಟೋಗಳಿಗೆ ಹಾಕಬೇಕು .
ಪಟ್ಟಣವು ಪುಣ್ಯಕ್ಷೇತ್ರವಾದ್ದರಿಂದ ಇಲ್ಲಿಗೆ ಪ್ರತಿದಿನ ಸಾವಿರಾರು ಜನರು ಬರುವುದರಿಂದ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಬೀದಿ ಬದಿ ವ್ಯಾಪಾರಿಗಳು
ಪಿ ಎಂ ಸ್ವ ನಿಧಿ ಯೋಜನೆಯಡಿಯಲ್ಲಿ ಪಟ್ಟಣದ ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದಿರಬೇಕು ಬೀದಿಬದಿ ಪಿ ಎಂ ಸ್ವ ನಿಧಿ ಯೋಜನೆಯ ಒಂದು ಕಾರ್ಡ್ ಕೊಡಲಾಗುತ್ತದೆ ಕಾರ್ಡಿನ ಜೊತೆ ರೇಷನ್ ಕಾರ್ಡ್ ಚುನಾವಣೆ ಗುರುತಿನ ಚೀಟಿ ವ್ಯಾಪಾರ ಮಾಡುವ ಸ್ಥಳದ ಛಾಯಾಚಿತ್ರ ಬ್ಯಾಂಕಿಗೆ ತೆಗೆದುಕೊಂಡು ಹೋಗಿ ದಾಖಲೆಗಳನ್ನು ನೀಡಿದರೆ ಪ್ರಥಮ ಬಾರಿಗೆ 10,000 ಸಾಲವನ್ನು ನೀಡಲಾಗುತ್ತದೆ. ಆ ಸಾಲವನ್ನು ಮರುಪಾವತಿಸಿ ಸಾಲವನ್ನು ತೀರಿಸಿದರೆ ಎರಡನೇ ಬಾರಿಗೆ 20.000 ಆ ಸಾಲಗಳು ತೀರಿಸಿದ ನಂತರ 50,000 ಸಾಲವನ್ನು ಪಿ ಎಂ ಸ್ವ ನಿಧಿ ಯೋಜನೆಯಡಿಯಲ್ಲಿ ನೀಡಲಾಗುತ್ತದೆ.
ಆದ್ದರಿಂದ ಪಟ್ಟಣದ ಬೀದಿಬದಿ ವ್ಯಾಪಾರಿಗಳು ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಪಾಲಯ್ಯ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ದ್ವಿತೀಯ ದರ್ಜೆ ಸಹಾಯಕ ಸುರೇಶ್. ಸಮುದಾಯ ಸಂಘಟಕರು ನಾಗರತ್ನಮ್ಮ, ಸಮುದಾಯ ಸಂಪನ್ಮೂಲ ವ್ಯಕ್ತಿ (ಸಿ ಆರ್ ಪಿ) ಎಂ ರೇಣುಕಮ್ಮ, ಶ್ರೀ ಮಾನ್ವಿತ ಕಲಾ ತಂಡ ಚಿತ್ರದುರ್ಗ ಕಲಾವಿದರಾದ ಚನ್ನಬಸಪ್ಪ ಐಹೊಳೆ ಡಿ ರಾಜಣ್ಣ ಮಲ್ಲೂರಹಳ್ಳಿ,ಎಲ್ಲಪ್ಪ ಐಹೊಳೆ, ರೇಣುಕಮ್ಮ, ಕುಮಾರ್, ದೇವಿರಮ್ಮ, ಹಾಗೂ ಪಟ್ಟಣದ ಸಾರ್ವಜನಿಕರು ಇದ್ದರು