ಚಳ್ಳಕೆರೆ : ರಾಷ್ಟ್ರೀಯ ಡೆಂಗೀ ದಿನಾಚರಣೆ ಅಂಗವಾಗಿ ಚಳ್ಳಕೆರೆ ನಗರದ ಪ್ರಮುಖ ರಸ್ತೆಗಳಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಜಾಥಾ ನಡೆಸಲಾಯಿತು.

ಬನ್ನಿ ಎಲ್ಲಾರೂ ಕೈ ಜೋಡಿಸೋಣ ಎಂಬ ಘೋಷ ವಾಖ್ಯದೊಂದಿಗೆ ರಾಷ್ಟ್ರೀಯ ಡೇಂಗಿ ದಿನಾಚರಣೆಯನ್ನು ಆಚರಿಸಿದರು.

ಜಾಗೃತಿ ರಥಕ್ಕೆ ನಗರಸಭೆ ಅಧ್ಯಕ್ಷೆ ಸುಮಕ್ಕ ಚಾಲನೆ ನೀಡಿದರು.

ನಗರ ಆರೋಗ್ಯ ಕೇಂದ್ರದಿಂದ ಅಂಬೇಡ್ಕರ್ ನಗರದ ಶಾರದಾ ಶಾಲೆಯವರೆಗೆ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸುಮಕ್ಕ ಅಂಜಿನಪ್ಪ, ಹಾಗೂ ಉಪಾಧ್ಯಕ್ಷ ಮಂಜುಳ ಪ್ರಸನ್ನ ಕುಮಾರ್, ಹಾಗೂ ಎಸ್.ಬಿ ತಿಪ್ಪೇಸ್ವಾಮಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು,
ಟಿ.ಎನ್. ಲೋಕೇಶ್, ತಾಲ್ಲೂಕು ಎನ್.ವಿ.ಬಿ.ಡಿ.ಸಿ.ಪಿ.ಯ. ಮೇಲ್ವಿಚಾರಕರು, ಸೌಭಾಗ್ಯಮ್ಮ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಬಿ.ಹೆಚ್. ರಾಜು, ಸಂಜಯ್ ಆರೋಗ್ಯ ನೀರಿಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಣಾ , ಪ್ರಯೋಗ ಶಾಲಾ ತಂತ್ರಜ್ಞರು, ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!