ಚಳ್ಳಕೆರೆ: ನಿನ್ನೆ ನಡೆದ ನಗರದ ಆರಾಧ್ಯದೈವ ಶ್ರೀ ವೀರಭದ್ರಸ್ವಾಮಿ ರಥೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ದೊಡ್ಡ ರಥೋತ್ಸವಕ್ಕೆ
ಬಾಳೆ ಹಣ್ಣು ಎಸೆದು ಪುನೀತರಾದರು.
ಅದರಂತೆ ಕೆಲವು ವಿದ್ಯಾವಂತ ಯುವಕರು ಬಾಳೆ ಹಣ್ಣಿನ ಮೇಲೆ ಹೆಸರು ಬರೆದು ಎಸೆಯುವುದು ಕಂಡು ಬಂದಿತು.
ರಾಜ್ಯದಲ್ಲಿ ಸಂಚಲನ ಮೂಡಿಸಿದ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಗರಣ ಎಂದು ಹಣ್ಣಿನ ಮೇಲೆ ಬರೆದು, ಅದಷ್ಟು ಬೇಗ ತನಿಖೆ ನಡೆದು ರಾಜಕೀಯ ಬದಿಗೊತ್ತಿ ಅದಷ್ಟು ಬೇಗ ಜಾಬ್ ಸಿಗುವಂತೆ ಮಾಡಪ್ಪ ದೇವರೆ ಎಂದು ಕೈ ಮುಗಿದು ರಥೋತ್ಸವಕ್ಕೆ ಬಾಳೆ ಹಣ್ಣು ಎಸೆಯುವುದು ವಿಶೇಷವಾಗಿ ಕಂಡು ಬಂದಿತು.