ರಾಜ್ಯದ ಸಂಸದರು ಸಚಿವರ ಜೊತೆಗೆ ಸಭೆ ನೆಡೆಸಿದ
ಸಿಎಂ ಸಿದ್ದರಾಮಯ್ಯ
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ
ದೆಹಲಿಯಲ್ಲಿ ರಾಜ್ಯದ 28 ಸಂಸದರನ್ನು ಕರೆದು, ಸಚಿವ ಸಂಪುಟದ
ಸದಸ್ಯರ ಜೊತೆಗೆ ಸಭೆ ನಡೆಸಿ,
ರಾಜ್ಯದಲ್ಲಿ ಆಗುವ ಕೆಲಸದ
ಪಟ್ಟಿ ತೆಗೆದುಕೊಂಡು ಬಂದಿದ್ದರು ಎಂದು ಚಿತ್ರದುರ್ಗದ ಸಂಸದ
ಗೋವಿಂದ ಕಾರಜೋಳ ಹೇಳಿದರು.
ಅವರು ಚಿತ್ರದುರ್ಗದಲ್ಲಿ
ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಸಭೆಯಲ್ಲಿ ಎಲ್ಲಾ
ಸಂಸದರು, ಸಚಿವರು ಮತ್ತು ಹಣಕಾಸು ಸಚಿವರ ಜೊತೆ ಚರ್ಚೆ
ನೆಡೆಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ
ಮಾಡುವಂತೆ ಮನವಿ ಮಾಡಿದರು.