ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ತಾಪಂ.ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಅಧ್ಯಕ್ಷತೆಯಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ನರೇಗಾ ಕಾಮಗಾರಿ ಹಾಗೂ ಗುಳೆ ಹೋಗುವವರ ಮಾಹಿತಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಚತೆ ಈಗೇ ಹಲವಾರು ವಿಷಯಗಳ ಬಗ್ಗೆ ಸುದೀರ್ಘವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಅಧಿಕಾರಿಗಳು ನಿಮ್ಮ ವ್ಯಾಪ್ತಿಯ ಕೇಂದ್ರ ಸ್ಥಳದಲ್ಲೇ ಇದ್ದು ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಅವಹಾಲು ಸ್ವೀಕರಿಸಿ ತತ್‌ಕ್ಷಣವೇ ಪರಿಹಾರ ರೂಪಿಸಬೇಕು ಎಂದರು.
ಇದೇ ಸಂಧರ್ಭದಲ್ಲಿ ತಾಪಂ. ನರೇಗಾ ಸಹಾಯಕ ನಿರ್ದೇಶಕರು ಸಂತೋಷ, ಸಂಪತ್ ಕುಮಾರ್, ತಾಲ್ಲೂಕಿನ ಎಲ್ಲಾ ಪಿ.ಡಿ.ಓ,ಕರವಸೂಲಿಗಾರರು,ಗಣಕಯಂತ್ರ ನಿರ್ವಾಹಕರು,ಭಿ.ಎಫ್.ಟಿ ಹಾಗೂ ಗ್ರಾಮಕಾಯಕ ಮಿತ್ರರವರು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು,ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು (ಸ.ಲೆ.ಪ) ಹಾಜರಿದ್ದರು.