[2:01 PM, 6/27/2024] ರಾಮುದೊಡ್ಮನೆ ಚಳ್ಳಕೆರೆ?:

ನಾಯಕನಹಟ್ಟಿ:: ವಿಶೇಷಚೇತನರು ಎಪಿಡಿ ಸಂಸ್ಥೆಯ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ತಾಲೂಕು ಆಡಳಿತ ವೈದ್ಯಧಿಕಾರಿ ಡಾ. ಕಾಶಿ ಹೇಳಿದ್ದಾರೆ

ಬುಧವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ
ಚಿತ್ರದುರ್ಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿತ್ರದುರ್ಗ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಚಿತ್ರದುರ್ಗ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಳ್ಳಕೆರೆ ಸಮುದಾಯ ಆರೋಗ್ಯ ಕೇಂದ್ರ ನಾಯಕನಹಟ್ಟಿ. ಎಚ್ ಸಿ ಎಲ್ ಫೌಂಡೇಶನ್. ದಿ ಅಶೋಶಿಯಲ್ ಆಫ್ ಪೀಪಲ್ ವಿತ್ ಡಿಸೆಬಲಿಟಿ(.ಎಪಿಡಿ) ಸಂಸ್ಥೆ ( ರಿ)ರಾಣಿಬೆನ್ನೂರು.
ಹಾಗೂ ನಿಶಾಡ್೯ ಸೇವಾ ಸಂಸ್ಥೆ (ರಿ) ಓಂ ಆಸ್ಪತ್ರೆ ರಾಣೀಬೆನ್ನೂರು ಇವರುಗಳ ಸಹಯೋಗದಲ್ಲಿ
“”ಬೆನ್ನುಹುರಿ ಅಪಘಾತ ವ್ಯಕ್ತಿಗಳಿಗೆ ವೈದ್ಯಕೀಯ ತಪಾಸಣೆ ಮತ್ತು ವ್ಯಾಯಾಮ ತರಬೇತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಮಾತನಾಡಿದ ಅವರು. ಗ್ರಾಮೀಣ ಪ್ರದೇಶದಲ್ಲಿ ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ಬಡ ಜನರು ಇಂತಹ ಇಂತಹ ತೊಂದರೆಗಳಿಗೆ ಒಳಗಾಗುತ್ತಾರೆ ಆಕಸ್ಮಿಕ ಅಪಘಾತಗಳು ಮರದ ಮೇಲಿಂದ ಬಿದ್ದಂತಹ ವ್ಯಕ್ತಿಗಳಿಗೆ ಮತ್ತು ಅತಿ ಹೆಚ್ಚು ಕೂತು ಕೆಲಸ ಮಾಡುವ ಬಡ ಜನರಿಗೆ ಬೆನ್ನುಹುರಿ ಅಪಘಾತ ವ್ಯಕ್ತಿಗಳಿಗೆ ಇಂತಹ ತೊಂದರೆಗಳು ಕಾಣುತ್ತವೆ.
ಎ ಪಿ ಡಿ ಸಂಸ್ಥೆ ಸುಮಾರು 25 ವರ್ಷದಿಂದ ಅನೇಕ ಶಿಬಿರದ ಮೂಲಕ ಈ ಒಂದು ಕಾರ್ಯವನ್ನು ನಡೆಸುತ್ತಾ ಬಂದಿದೆ ಆದ್ದರಿಂದ ವಿಶೇಷ ಚೇತನರು ಎಪಿಡಿ ಸಂಸ್ಥೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ರೋಗಿಗಳಿಗೆ ಮನವರಿಕೆ ಮಾಡಿದರು.

ಎಪಿಡಿ ಸಂಸ್ಥೆಯ ಸಂಯೋಜಕ ನಿಂಗಪ್ಪ ಕೆ ದೊಡ್ಮನಿ
ಮಾತನಾಡಿ ಎಪಿಡಿ ವತಿಯಿಂದ ಕೈ.ಕಾಲು ಸ್ವ ದೀನ ಕಳೆದುಕೊಂಡ ವಿಕಲಚೇತನರ ಸಮುದಾಯಕ್ಕೆ ಶ್ರಮಿಸುತ್ತಿದೆ. .ಎಪಿಡಿ ಸಂಸ್ಥೆ ನಾಲ್ಕು ಜನ ವಿಕಲಚೇತನರಿಂದ 1950ರಲ್ಲಿ ಪ್ರಾರಂಭವಾಯಿತು ನಿರಂತರವಾಗಿ ಎಪಿಡಿ ಸಂಸ್ಥೆ ಬಂದಿದೆ ವರ್ಷಕ್ಕೆ ಸುಮಾರು ಒಂದು ಲಕ್ಷದ ಐವತ್ತು ಸಾವಿರ ಜನರಿಗೆ ಈ ಸೌಲಭ್ಯವನ್ನು ನೀಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ. ವಿಕಾಸ್, ಡಾ ಅಶೋಕ್, ಫಾರ್ಮಸಿ ಅಫ್ರೋಜ್, ಎಪಿಡಿ ಸಂಸ್ಥೆಯ ಡಿ ಸುಮಂಗಳ, ಪುಷ್ಪವತಿ, ಎಂ ಗೀತಾ ಸಮುದಾಯ ಸಂಯೋಜಕರು ಎಪಿಡಿ ರಾಣೆಬೆನ್ನೂರು. ಪ್ರಶಾಂತ್ ಎಂ. ಹಾಗೂ ವಿಕಲಚೇತನರು ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು
[2:01 PM, 6/27/2024] ರಾಮುದೊಡ್ಮನೆ ಚಳ್ಳಕೆರೆ?:

About The Author

Namma Challakere Local News
error: Content is protected !!