ಮನುಮೈನಯ್ಯನಹಟ್ಟಿ ಸ.ಹಿ.ಪ್ರಾ ಶಾ.ಒಂದನೇ ತರಗತಿ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಸಿಆರ್ ಪಿ . ಈಶ್ವರಪ್ಪ.

ಜೋಡೆತ್ತಿನ ಗಾಡಿಯ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳಿಂದ ಆಂಗ್ಲ ಶಾಲೆಗೆ ವಿದ್ಯಾರ್ಥಿಗಳು ದಾಖಲಾಗುವಂತೆ ಜಾಗೃತಿ ಮೂಡಿಸಲಾಯಿತು.

ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಾಲೆಗಳು ಅನುಕೂಲವಾಗಲಿದೆ ಎಂದು ಸಿ ಆರ್ ಪಿ.
ಆರ್. ಈಶ್ವರಪ್ಪ ಹೇಳಿದ್ದಾರೆ.

ಬುಧವಾರ ಎನ್ ಮಹದೇವಪುರ ಗ್ರಾ.ಪಂ. ವ್ಯಾಪ್ತಿಯ ಮನುಮೈಯ್ಯನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 2024 -25ನೇ ಶೈಕ್ಷಣಿಕ ವರ್ಷದ ಒಂದನೇ ತರಗತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾರಂಭೋತ್ಸವಕ್ಕೆ ದೀಪ ಬೆಳಗಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಗ್ರಾಮೀಣ ಪ್ರದೇಶದ ಬಡವರು ಕೂಲಿಕಾರ್ಮಿಕರ ಮಕ್ಕಳು ಆಂಗ್ಲ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಲು ಅನುಕೂಲವಾಗಲಿದೆ. ಗ್ರಾಮೀಣ ಭಾಗದ ಬಹುತೇಕ ಮಕ್ಕಳಿಗೆ ಆಂಗ್ಲ ಶಾಲೆಗಳು ಮರೀಚಿಕೆಯಾಗಿತ್ತು. ಪೋಷಕರು ಖಾಸಗಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಕೊಡಿಸಲು ತಮ್ಮ ಮಕ್ಕಳನ್ನು ಆಂಗ್ಲ ಶಾಲೆಗಳಿಗೆ ಸೇರಿಸಿಬೇಕಾದರೆ ಸಾರಿಗೆ ವ್ಯವಸ್ಥೆ ಇಲ್ಲದೆ ಮಕ್ಕಳು ಕನ್ನಡ ಶಾಲೆಗಳಲ್ಲಿ ಓದಬೇಕಾಗಿ ಕೂಲಿ ಮಾಡುವ ಪೋಷಕರ ಮಕ್ಕಳು ಆಂಗ್ಲ ಶಾಲೆಗಳ ಶುಲ್ಕವನ್ನು ಬರಿಸುವ ಪರಿಸ್ಥಿತಿ ಗ್ರಾಮೀಣ ಭಾಗದಲ್ಲಿ ಇರಲಿಲ್ಲ ಈಗ ಗ್ರಾಮೀಣ ಭಾಗದಲ್ಲಿ ಆಂಗ್ಲ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕೈಜೋಡಿಸಿರುವುದು ತುಂಬಾ ಸಂತೋಷದ ವಿಷಯ ಎಂದರು.

ಇನ್ನೂ ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ ಮಾತನಾಡಿ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಮ್ಮ ಗ್ರಾಮದಲ್ಲಿ ಆಂಗ್ಲ ಶಾಲೆ ಬೇಕು ಎಂದು ಮನವಿಯನ್ನ ಮಾಡಿದ್ದಿ ನಾಯಕನಹಟ್ಟಿ ಪಟ್ಟಣದ ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳು ಆಂಗ್ಲ ಮಾಧ್ಯಮ ಶಿಕ್ಷಣವನ್ನ ಕಲಿಯಲು ತುಂಬಾ ಕಷ್ಟವಾಗುತ್ತದೆ ಆದರಿಂದ ನಮ್ಮ ಗ್ರಾಮಕ್ಕೆ ಆಂಗ್ಲ ಶಾಲೆ ಬೇಕು ಎಂದಾಗ ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಪರಿಶ್ರಮದ ಫಲದಿಂದ ನಮ್ಮೂರಿಗೆ ಆಂಗ್ಲ ಶಾಲೆ ಪ್ರಾರಂಭೋತ್ಸವ ಮಾಡಲಾಗಿದೆ ಎಂದರು

ಇದೇ ಸಂದರ್ಭದಲ್ಲಿ ಎನ್ ಮಹದೇವಪುರ ಗ್ರಾ.ಪಂ. ಸದಸ್ಯೆ ಮಾಜಿ ಅಧ್ಯಕ್ಷೆ ಕೆ ಟಿ ಜಯಂತಿ, ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಸವಿತಾ ಬಾಯಿ, ಸದಸ್ಯ ಬಸವರಾಜ್, ಊರಿನ ಮುಖಂಡರಾದ ಜಯಣ್ಣ ತಿಪ್ಪೇಸ್ವಾಮಿ, ನಿರಂಜನ್, ಜಯರಾಮ ನಾಯ್ಕ, ಶಾಲೆಯ ಮುಖ್ಯ ಶಿಕ್ಷಕ ವಿಜಯ್, ಶಿಕ್ಷಕರಾದ ಬಿ ಶೈಲಜಾ, ಎನ್ ಶೈಲ ಶ್ರೀ, ಲಕ್ಷ್ಮಿದೇವಿ, ವಿಜಯಲಕ್ಷ್ಮಿ, ಉಷಾ, ಶಶಿಧರ್, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು

About The Author

Namma Challakere Local News
error: Content is protected !!