ಗೌಡಗೆರೆ ಗ್ರಾ ಪಂ ಅಧ್ಯಕ್ಷ. ರೇವಕ್ಕ ಡಿ.ಕೆ ಬಸವರಾಜ್
ನಾಯಕನಹಟ್ಟಿ. ಸಮೀಪದ ಗೌಡಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ರೇವಕ್ಕ ಡಿ.ಕೆ.ಬಸವರಾಜ್ ಆಯ್ಕೆಯಾಗಿದ್ದಾರೆ.
ಗೌಡಗೆರೆ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಚುನಾವಣೆಗೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ರೇವಕ್ಕ ಮಾತ್ರ ನಾಮಪತ್ರ ಸಲ್ಲಿಸಿದರು.
16 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ರೇವಕ್ಕ ಡಿ. ಕೆ. ಬಸವರಾಜ್ ಆಯ್ಕೆ ಆಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕೆ ಎಸ್ ಸುರೇಶ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಲ್ಲೂರಹಟ್ಟಿ ಗೌಡ್ರು ತಿಪ್ಪೇಸ್ವಾಮಿ. ಎಚ್ ಬಿ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಸಣ್ಣಪ್ಪ, ಸದಸ್ಯರಾದ ಟಿ ರಂಗಪ್ಪ, ಶಾಂತಮ್ಮ, ಮಂಜಕ್ಕ, ಅನ್ನಪೂರ್ಣೇಶ್ವರಿ, ನಾಗಣ್ಣ, ರಾಧಮ್ಮ ಮಂಜುಳ ಹಾಗೂ ಮುಖಂಡ ಮಾಜಿ ತಾಲೂಕು ಪಂಚಾಯತಿ ಸದಸ್ಯ ತಿಪ್ಪೇಸ್ವಾಮಿ, ಹೆಚ್ ಬಿ ತಿಪ್ಪಣ್ಣ, ಮಲ್ಲೂರಹಟ್ಟಿ ನಾಗರಾಜ್, ಗೌಡಗೆರೆ ರಂಗಪ್ಪ, ಜಿ ಟಿ ತಿಪ್ಪೇಸ್ವಾಮಿ, ಎಲ್ಲಪ್ಪ, ಜೋಗಿಹಟ್ಟಿ ಎಸ್ ವೆಂಕಟೇಶ್, ಕೆ ಜಿ ಮಂಜುನಾಥ್, ಪಿಡಿಒ ಎಸ್ ವೆಂಕಟೇಶ್, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಗುರುಸ್ವಾಮಿ, ವೀರೇಶ್, ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಮುಖಂಡರು ಗ್ರಾಮಸ್ಥರು ಇದ್ದರು