ಚಳ್ಳಕೆರೆ ನ್ಯೂಸ್ :
ಸ್ವಾಮಿ ಪುರುಷೋತ್ತಮಾನಂದಜೀ ಅವರ ವ್ಯಕ್ತಿತ್ವ ಮಹತ್ವದ್ದು”- ಪೂಜ್ಯ ಮಾತಾಜೀ ತ್ಯಾಗಮಯಿ ಅಭಿಪ್ರಾಯ ಪಟ್ಟರು
ಚಳ್ಳಕೆರೆ ನಗರದ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಸ್ವಾಮಿ ಪುರುಷೋತ್ತಮಾನಂದಜೀ ಮಹಾರಾಜ್ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ “ಸ್ವಾಮಿ ಪುರುಷೋತ್ತಮಾನಂದ ಸ್ಮರಣೆ” ಎಂಬ ವಿಷಯದ ಕುರಿತಾಗಿ ವಿಶೇಷ ಪ್ರವಚನ ನೀಡಿದ ಅವರು
ಸ್ವಾಮಿ ಪುರುಷೋತ್ತಮಾನಂದಜೀ
ಅವರು ಬೆಂಗಳೂರು- ಪೊನ್ನಂಪೇಟೆ-ಬೆಳಗಾವಿಯ ಶ್ರೀ ರಾಮಕೃಷ್ಣ ಆಶ್ರಮ ಮತ್ತು ಮಿಷನ್ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ತುಂಬಾ ಮಹತ್ವದ್ದು,
ಕೆಲವೇ ನಗರಗಳಿಗೆ ಸೀಮಿತವಾಗಿದ್ದ ದಿವ್ಯತ್ರಯರ ಜೀವನ-ಸಂದೇಶಗಳನ್ನು ಕರ್ನಾಟಕದ ಹಳ್ಳಿ ಮತ್ತು ನಗರ ಪ್ರದೇಶಗಳಿಗೆ ಹೋಗಿ ಪ್ರಚಾರ ಮಾಡಿ ಅಲ್ಲಿ ದಿವ್ಯತ್ರಯರ ಆಶ್ರಮಗಳನ್ನು, ದೊಡ್ಡ ಸಂಖ್ಯೆಯ ಸಂನ್ಯಾಸಿ-ಸಂಸ್ಯಾನಿಯರ ಪಡೆಯನ್ನು ಕಟ್ಟುವಲ್ಲಿ ಸ್ವಾಮೀಜಿ ಅವರ ಪಾತ್ರ ತುಂಬಾ ಹಿರಿದಾದದ್ದು ಎಂದರು.
ಸ್ವಾಮಿ ಪುರುಷೋತ್ತಮಾನಂದಜೀ ಅವರು ಕನ್ನಡ ಆಧ್ಯಾತ್ಮಿಕ ಸಾಹಿತ್ಯಲೋಕಕ್ಕೆ ನೀಡಿದ ಪುಸ್ತಕಗಳ ವಿಶೇಷತೆಗಳನ್ನು ತಿಳಿಯಪಡಿಸಿದರು.
ಅಲ್ಲದೆ ಸ್ವಾಮೀಜಿ ಅವರ ಶಿಸ್ತು ಮತ್ತು ಸಂಯಮ ಹಾಗೂ ಹಾಸ್ಯ ಪ್ರಸಂಗಗಳನ್ನು ವಿಶೇಷವಾಗಿ ಉಲ್ಲೇಖಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ವಾಮಿ ಪುರುಷೋತ್ತಮಾನಂದಜೀ ಅವರ ಜೀವನ ಮತ್ತು ವ್ಯಕ್ತಿತ್ವದ ಬಗ್ಗೆ ಆಶ್ರಮದ ಸದ್ಭಕ್ತರಾದ ವೀಣಾ ಮಂಜುನಾಥ ಮತ್ತು ಯಶೋಧಾ ಪ್ರಕಾಶ್ ಅವರು ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದ ಆರಂಭದಲ್ಲಿ ಸ್ವಾಮೀಜಿ ವಿರಚಿತ ಭಕ್ತಿಗೀತೆಗಳ ಗಾಯನ ನಡೆಯಿತು.
ಈ ಸತ್ಸಂಗ ಕಾರ್ಯಕ್ರಮದಲ್ಲಿ ಆಶ್ರಮದ ಭಕ್ತರಾದ ಗೀತಾ ವೆಂಕಟೇಶ್,ಗೀತಾ ನಾಗರಾಜ್,ಸುಮನ ಕೋಟೇಶ್ವರ,ಕವಿತ, ಉಷಾ ಶ್ರೀನಿವಾಸಲು, ಅಂಬುಜಮ್ಮ, ವನಜಾಕ್ಷಮ್ಮ, ಗಂಗಾಂಬಿಕಾ ರವಿ,ವಸಂತಮ್ಮ, ಅನರ್ಘ್ಯಮ್ಮ, ಸುಜಾತ ಬಸವರಾಜ್, ವೆಂಕಟೇಶ್, ಲಕ್ಷೀ ಚೆನ್ನಕೇಶವ, ಯತೀಶ್ ಎಂ.ಸಿದ್ದಾಪುರ ಅವರು ಭಾಗವಹಿಸಿದ್ದರು.