ಚಳ್ಳಕೆರೆ ನ್ಯೂಸ್ :

ಯೋಗ ಮಾಡಿದರೆ ರೋಗ ಇಲ್ಲ ಎನ್ನುವ ಮಾತಿನ ಸಾರಾಂಶದೊಂದಿಗೆ ನಮ್ಮ ಜೀವನದಲ್ಲಿ ಯೋಗವನ್ನು ಅಳವಡಿಕೆ ಮಾಡಿಕೊಂಡಿದ್ದಾರೆ ಉತ್ತಮವಾದ ಆರೋಗ್ಯವನ್ನು ನಾವು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಗೌರವ ಅಧ್ಯಕ್ಷ ಡಿ.ಶಿವನಾಗಪ್ಪ ಹೇಳಿದರು.

ಅವರು ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ನೀಡಬೇಕು ಅದರೊಟ್ಟಿಗೆ ವಿದ್ಯಾರ್ಥಿಗಳು ಶಾಲೆಗೆ ಉತ್ತಮ ಕೊಡುಗೆಯನ್ನು ನೀಡಬೇಕು ಎನ್ನುವ ಛಲವನ್ನು ಇಟ್ಟುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇನ್ನೂ ಇದೇ ಸಂಧರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ದಯಾನಂದ ಪ್ರಹ್ಲಾದ್ ಮಾತನಾಡಿ,
ವಿದ್ಯಾರ್ಥಿಗಳು ಈಗನಿಂದಲೇ ಉನ್ನತ ವ್ಯಾಸಂಗದ ಕಡೆಗೆ ಗಮನ ನೀಡಬೇಕು ಅದರೊಟ್ಟಿಗೆ ತಮ್ಮ ಸ್ವಚ್ಛತೆ, ಪರಿಸರ ಸಂರಕ್ಷಣೆಯನ್ನು ಮಾಡುವ ಸೇವ ಮನೋಭಾವನೆಯನ್ನು ಬಳಸಿಕೊಳ್ಳಬೇಕು ಮತ್ತು ಶಿಕ್ಷಕರಿಗೆ ಉತ್ತಮವಾದ ವಿದ್ಯಾರ್ಥಿಗಳು ಎನ್ನುವ ಮಟ್ಟಿಗೆ ತಮ್ಮ ನಡೆಯನ್ನ ಬದಲಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಂಸ್ಥೆಯ ಸದಸ್ಯರಾದ ಡಿ.ಎನ್.ಶಿವಪ್ರಸಾದ್ ಮಾತನಾಡಿ ವಿಶ್ವದಾದ್ಯಂತ ಜೂನ 21ರಂದು ಯೋಗ ದಿನವನ್ನು ಆಚರಣೆ ಮಾಡುತ್ತಿದ್ದಾರೆ ಆದರೆ ನಮ್ಮ ಆರೋಗ್ಯ ದಿನ ವಿಡಿ ಚೆನ್ನಾಗಿರಬೇಕಾದರೆ ಪ್ರತಿದಿನವೂ ಕೂಡ ಯೋಗದ ಕಡೆಗೆ ನಾವು ಮುಖ ಮಾಡಿದರೆ ಉತ್ತಮ ಆರೋಗ್ಯ ಲಭಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಇನ್ನೂ ಯೋಗ ಶಿಕ್ಷಕರಾದ ಧನಂಜಯ ಮಾತನಾಡಿ, ವಿದ್ಯಾರ್ಥಿಗಳು ಈಗಿನಿಂದಲೇ ಯೋಗ, ಜ್ಞಾನ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದರೆ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು , ಯೋಗದಿಂದ ರೋಗ ಮುಖ್ಯವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಚಿಕ್ಕವಯಸ್ಸಿನಲ್ಲೇ ಯೋಗ ಅಭ್ಯಾಸ ಒಳ್ಳೆಯದು
ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಯೋಗ ಶಿಕ್ಷಕರಾದ ಧನಂಜಯ, ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ‌ ಮುಖ್ಯ ಶಿಕ್ಷಕ ಪ್ರಸಾದ್, ಶೈಲಜಾ, ಶೋಭಾ, ಹಾಗೂ ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

About The Author

Namma Challakere Local News
error: Content is protected !!