ಚಳ್ಳಕೆರೆ ನ್ಯೂಸ್ :
ರೇಣುಕ ಸ್ವಾಮಿ ಕಿಡ್ನಾಪ್ ಗೆ ಬಳಸಿದ್ದ ಆಟೋ ಸೀಜ್
ಮಾಡಿದ ಪೊಲೀಸರು
ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,
ಕಿಡ್ನಾಪ್ ಮಾಡಿದ್ದ ಆಟೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಥಳ ಮಹಜರ್ ಹಾಗೂ ಮನೆಗಳ ಶೋಧಿಸಲೆಂದೆ ಬಂದಿದ್ದ
ಪೊಲೀಸರು, ಚಿತ್ರದುರ್ಗ ನಗರದ ಮಹಾವೀರ ನಗರದ ಜಗದೀಶನ
ಮನೆಗೆ ಭೇಟಿ ನೀಡಿ, ಕಿಡ್ನಾಪ್ ಮಾಡುವ ದಿನ ಬಳಕೆಯಾದ
ವಸ್ತುಗಳು ಹಾಗೂ ಆಟೋ ಜಪ್ತಿ ಮಾಡಿದ್ದಾರೆ.
ಬೆರಳಚ್ಚು ತಜ್ಞರು,
ಎಲ್ಲಾ ಮಾಹಿತಿ ಸಂಗ್ರಹಿಸಿದ್ದಾರೆ. ಜಗದೀಶ್, ಆತನ ಪತ್ನಿಯನ್ನು
ನಿಲ್ಲಿಸಿ ಫೋಟೋ ತೆಗೆಸಿಕೊಳ್ಳುವ ಮೂಲಕ ವಶಕ್ಕೆ ಪಡೆದರು.