ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಚನ್ನಗಾನಹಳ್ಳಿ ಗ್ರಾಮದಲ್ಲಿ
ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬಕ್ಕೆ ಮುಸ್ಲಿಂ ಬಾಂಧವರು ಸಾಕ್ಷಿಯಾದರು.
ಗ್ರಾಮದ ತಳಕು ರಸ್ತೆ ಮಾರ್ಗದಲ್ಲಿ ಇರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.
ಇನ್ನೂ ಸೋಮವಾರ ಗ್ರಾಮದ ಕಾಲೋನಿಯ ಮುಸ್ಲಿಂ ಬಾಂಧವರು ಬೆಳಗ್ಗೆ 9:00 ಗಂಟೆಗೆ ಜಾಮಿಯಾ ಮಸೀದಿ ಇಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಮಾಜ್ ಬಳಿಕ ಒಬ್ಬರಿಗೊಬ್ಬರು ಅಪ್ಪಿಕೊಂಡು ಬಕ್ರಿದ್ ಹಬ್ಬದ ಶುಭಾಶಯ ಕೋರಿ ವಿನಿಮಯ ಮಾಡಿಕೊಂಡರು.
ಇದೆ ವೇಳೆ ಗ್ರಾಮದ ನಂದಿಸಾಬ್, ಭಾಷಸಾಬ್, ಇಮಾಮ್ ಸುಲ್ತಾನ್, ಪೀರಾಸಾಬ್,
ಟಿಪ್ಪು ಸುಲ್ತಾನ್, ಅಬ್ದುಲ್ ಭಾಷ, ಮಹಮ್ಮದ್, ದಾದಪೀರ್, ಇಮಾಮ್, ಸದಾಮ್, ಅಪ್ರಿಜ್ ಖಾನ್ ಈಗೇ ಹಲವರು ಬಕ್ರೀದ್ ಹಬ್ಬದ ಶುಭಾಷಯಗಳು ಕೋರಿದ್ದಾರೆ.