ಚಳ್ಳಕೆರೆ ನ್ಯೂಸ್ :
ಎಂಎಲ್ ಸಿ ಯನ್ನು ಎಚ್ಚರಿಕೆಯಿಂದ ಮಾಡಬೇಕು: ಡಿಸಿ
ವೆಂಕಟೇಶ್
ಅನಗತ್ಯವಾಗಿ ಎಂಎಲ್‌ಸಿ ಮಾಡಬೇಡಿ ಎಂದು ಜಿಲ್ಲಾಧಿಕಾರಿ
ಟಿ. ವೆಂಕಟೇಶ್ ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.
ಅವರು ಆಸ್ಪತ್ರೆಗೆ ಭೇಟಿ ನೀಡಿ, ನಂತರ ಮಾಧ್ಯಮಗಳೊಂದಿಗೆ
ಮಾತಾಡಿದರು.
ದೌರ್ಜನ್ಯಕ್ಕೆ ಸಂಬಂಧಿಸಿದ ವೈದ್ಯಕೀಯ
ಪ್ರಕರಣಗಳನ್ನು ನಿಯಮಾನುಸಾರ ಮಾಡಬೇಕು, ಆದರೆ
ನಿಯಮಗಳಿಗೆ ವಿರುದ್ಧ ಮತ್ತು ಅನಗತ್ಯ ಎಂಎಲ್‌ಸಿ ಮಾಡಬೇಡಿ,
ಎಂಎಲ್‌ಸಿಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಇದರ
ಜೊತೆಗೆ ದಾಖಲೆಯನ್ನು ಸಮರ್ಪಕವಾಗಿ ನಿರ್ವಹಿಸಿ ಎಂದರು.