ಚಳ್ಳಕೆರೆ ನ್ಯೂಸ್ :
ಒಂಟಿ ಮಹಿಳೆ ಮನೆಗೆ ನುಗ್ಗಿದ ಓರ್ವ ವ್ಯಕ್ತಿ, ಅಲ್ಲಿ ಆಗಿದ್ದೇ ಬೇರೆ
ಹೌದು ವಿವಾಹಿತ ಮಹಿಳೆ ಮೇಲೆನ ಪ್ರೀತಿ ವ್ಯಾಮೋಹಕ್ಕೆ ಒಳಗಾದ ವ್ಯಕ್ತಿಯೊಬ್ಬ ಒರ್ವ ಮಹಿಳೆಯ ಗಂಡನ ಸಾವಿಗೆ ಕಾರಣನಾಗಿದ್ದಾನೆ,
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಮಹಿಳೆಯೊಬ್ಬಳು ಮನೆಯಲ್ಲಿ ಇರುವಾಗ ಅದೇ ಗ್ರಾಮದ ಶಶಿ ಎಂಬವವರು ಮನೆಗೆ ನುಗ್ಗಿ ಪ್ರೀತಿಯ ನೆಪದಲ್ಲಿ ಮಹಿಳೆಯನ್ನು ಎಳೆಯುವಾಗ ಮಹಿಳೆಯ ಮಗ ದಿನೇಶ್ ಅಡ್ಡಬಂದು ವಿಚಾರಿಸಿದಾಗ ಇಬ್ಬರ ಮಧ್ಯೆ ಗಲಾಟೆ ಶುರುವಾಗಿ ಕೊನೆಗೆ ಶಶಿ ಆಪ್ತರು ಹಾಗೂ ಮಹಿಳೆಯ ಗಂಡನ ಮಧ್ಯೆ ಗಲಾಟೆ ವಿಕೋಪಕ್ಕೆ ಹೋಗಿ ಕೊನೆಗೆ ಮಹಿಳೆಯ ಗಂಡ ತಿಪ್ಪೆಸ್ವಾಮಿಯ ಸಾವಿನ ಮೂಲಕ ಗಲಾಟೆ ಅಂತ್ಯ ಕಂಡಿದೆ.
ಈ ಪ್ರಕರಣ ಚಳ್ಳಕೆರೆ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇನ್ನೂ ಸ್ಥಳಕ್ಕೆ ಚಳ್ಳಕೆರೆ ಪೋಲೀಸ್ ಠಾಣೆ ಪಿಐ ಕೆ.ಕುಮಾರ್ ಹಾಗು ಸಿಬ್ಬಂದಿ ವರ್ಗ ದಾವಿಸಿ ಸ್ಥಳ ತನಿಖೆ ಕೈಗೊಂಡಿದ್ದಾರೆ.