ಚಳ್ಳಕೆರೆ ನ್ಯೂಸ್ :

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಾಟಕ ಆದ್ಯಂತ ಹೆಸರುವಾಸಿಯಾದ ಶ್ರೀ ಗೌರಸಮುದ್ರ ಮಾರಮ್ಮ ದೇವಿಯು ನೆಲೆಸಿರುವಂತಹ ಗೌರಸಮುದ್ರ ಗ್ರಾಮದಲ್ಲಿ

ಭಕ್ತಾದಿಗಳು ನೂರಾರು ಕಿಲೋಮೀಟರ್ ದೂರಗಳಿಂದ ದಿವ್ಯ ದರ್ಶನಕ್ಕೆ ಪಡೆಯೋಕೆ ಪ್ರತಿನಿತ್ಯವೂ ಬರುತ್ತಿರುತ್ತಾರೆ

ಆದರೆ ಗೌರಸಮುದ್ರ ಗ್ರಾಮದ ಮುಖ್ಯ ರಸ್ತೆಯ ಎಡಭಾಗದಲ್ಲಿ ಮಳೆಯ ಕಾರಣದಿಂದಾಗಿ ದಾರಿಯ ಪಕ್ಕದಲ್ಲಿ ಇರುವ ರಸ್ತೆ ಕುಸಿಯುತ್ತಾ ಇದೆ

ಪಕ್ಕದಲ್ಲೇ ದೊಡ್ಡ ಪಾಳುಬಿದ್ದ ಬಾವಿಯ ಕಂದಕವಿದೆ ಆದರೆ ಇಲ್ಲಿಗೆ ಬರುವ ಭಕ್ತಾಧಿಗಳು ಈದೇ ಮಾರ್ಗವಾಗಿ ಆಗಮಿಸಬೇಕು

ದೇವಸ್ಥಾನಕ್ಕೆ ಬರುವಂತಹ ಭಕ್ತಾದಿಗಳ ವಾಹನ ಸವಾರರಿಗೆ ಪ್ರಾಣಾಯಪಾಯ ಉಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ

ಭಯದ ಭೀತಿಯಿಂದ ವಾಹನಸವಾರರು ಸಂಚರಿಸುವಂತಾಗಿದೆ

ಈ ವರದಿ ಕುರಿತಾಗಿ ಅನೇಕ ಬಾರಿ ವರದಿ ಬಿತ್ತರಿಸಿದರು ಅಧಿಕಾರಿಗಳು ಜಾಣ ಕುರುಡುತನದಿಂದ ತಾತ್ಕಾಲಿಕವಾಗಿ ಡಿಪ್ಲೆಕ್ಟರ್ ಹಾಕಿ ಕೈತೊಳೆದುಕೊಳ್ಳುತ್ತಾರೆ ಆದರೆ ಸಮಸ್ಯೆ ಮಾತ್ರ ಹಾಗೇ ಉಳಿದಿದೆ.

ಆದ್ದರಿಂದ ಅಪಾಯ ಸಂಭವಿಸುವ ಮುನ್ನವೇ ಈ ಬಾವಿಯನ್ನು ಮುಚ್ಚುವುದರ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಜಿಲ್ಲಾಡಳಿತವನ್ನು ಒತ್ತಾಯ ಮಾಡಲಾಗುವುದು ಎಂದು ಗ್ರಾಮ ಪಂಚಾಯತಿ ಸದಸ್ಯರು ಟಿ ಶಶಿಕುಮಾರ್ ಮಾಧ್ಯಮದೊಂದಿಗೆ ತಿಳಿಸಿದ್ದಾರೆ.

About The Author

Namma Challakere Local News
error: Content is protected !!