ಚಳ್ಳಕೆರೆ ನ್ಯೂಸ್ : ಜೂನ್ ತಿಂಗಳು ಬಿತ್ತನೆ ಸಮಯ ಯಾವುದೇ ಕಾರಣಕ್ಕೂ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೃತಕ ಅಬಾವ ಸೃಷ್ಟಿ ಮಾಡಿದರೆ ಶಿಸ್ತು ಕ್ರಮ ವಹಸಿಲಾಗುವುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಹೇಳಿದರು.
ಅವರು ನಗರದ ಉಪಕೃಷಿ ನಿರ್ದೇಶಕರ ಕಛೇರಿಯಲ್ಲಿ ಆಯೋಜಿಸಿದ ಗೊಬ್ಬರ ಹಾಗೂ ಕೀಟನಾಶಕಗಳ ಮಾರಾಟ ಮಾಡುವ ಮಾಲೀಕರು ತರಬೇತಿ ಕಾರ್ಯಗಾರ ಹಾಗೂ ಮುಂಗಾರು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ರೈತರು ಈಗಾಗಲೇ ಕೃಷಿ ಭೂಮಿಗಳನ್ನು ಹಸನು ಮಾಡುತ್ತಾ ಬಿತ್ತನೆ ಬೀಜಕ್ಕೆ ಬರುತ್ತಾರೆ, ಬಿತ್ತೆನೆ ಬೀಜಗಳನ್ನು ಪರೀಶಿಲಿಸಿ ನಂತರ ರೈತರಿಗೆ ವಿತರಣೆ ಮಾಡಬೇಕು ಹಣದ ಆಸೆಗೆ ಹಾಗೂ ಕೀಟನಾಶಕಗಳನ್ನು ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಅವಧಿ ಮುಗಿದ ಕೀಟನಾಶಕ ಮಾರಟ ಮಾಡುವುದು ಕಂಡುಬAದರೆ ಸೂಕ್ತಕ್ರಮ ಜರುಗಿಸಲಾಗುವುದು ಎಂದರು.
ಇನ್ನೂ ಸಹಾಯಕ ಕೃಷಿ ನಿದೇರ್ಶಕ ಡಾ.ಅಶೋಕ್ ಪ್ರಾಸ್ತವಿಕವಾಗಿ ಮಾತನಾಡಿ, ರಾಸಾಯನಿಕ ಗೊಬ್ಬರ ವಿತರಿಸುವ ವೇಳೆ ಅದರ ಬೆಲೆ ಹಾಗೂ ಅವಧಿಯನ್ನು ಪರೀಶಿಲಿಸಿ ರೈತರಿಗೆ ಕೊಡಬೇಕು, ಯಾವುದೇ ಕಾರಣಕ್ಕೂ ಕಳೆಪೆ ಗೊಬ್ಬರ ಮಾರಾಟ ಮಾಡಬಾರದು ಸುರಕ್ಷಿತ ಕೀಟನಾಶಕಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಕಳೆ ನಾಶಕ ಕೊಡುವಾಗ ಹಾಗು ಹೊಡೆಯುವಾಗ ರೈತರಿಗೆ ಸಂಪೂರ್ಣವಾಗಿ ಮಾಹಿತಿ ನೀಡಬೇಕು, ಸಬ್ಸಿಡಿ ದರದಲ್ಲಿ ಯೂರಿಯಾ, ಡಿಎಪಿ ಗೋಬ್ಬರಗಳನ್ನು ನೀಡಬೇಕು ರಿಯಾಯಿತಿ ದರಕ್ಕಿಂತ ಹೆಚ್ಚಿನಗೆ ಮಾರಾಟ ಮಾಡುವಾಗಿಲ್ಲ ಎಂದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಜಂಟಿ ನಿರ್ದೇಶಕ ಮಂಜುನಾಥ್, ಉಪ ಕೃಷಿ ನಿರ್ದೇಶಕ ಡಾ.ಪ್ರಭಾಕರ್, ಸಹಾಯಕ ಕೃಷಿ ನಿದೇರ್ಶಕ ಡಾ.ಅಶೋಕ್, ತಾಂತ್ರಿಕ ಸಹಾಯಕ ಅಧಿಕಾರಿ ಮೇಘನಾ, ಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಮಂಜುನಾಥ್, ಇತರ ಸದಸ್ಯರು, ಹಾಗೂ ಎಲ್ಲಾ ಕೀಟನಾಶಕ ಅಂಗಡಿಗಳ ಮಾಲೀಕರು ಹಾಜರಿದ್ದರು.