ಚಳ್ಳಕೆರೆ ನ್ಯೂಸ್ :
ಭರಮಸಾಗರದ ದೊಡ್ಡ ಕೆರೆಗೆ ಹರಿದು ಬರುತ್ತಿರುವ
ಮಳೆ ನೀರು
ಹೊಳಲ್ಕೆರೆ ಕ್ಷೇತ್ರದ ಚಿಕ್ಕಜಾಜೂರಿನಲ್ಲಿ ಬೆಳಗಿನ ಜಾವದಲ್ಲಿ ಸುರಿದ
ಮಳೆಯಿಂದ, ಸುತ್ತಮುತ್ತಲಿನ ಕೆರೆ ಕಟ್ಟೆಗಳು, ಹಳ್ಳಕೊಳ್ಳಗಳು
ತುಂಬಿ ಹರಿಯುತ್ತಿವೆ.
ಮಿಂಚು ಗುಡುಗು ಸಹಿತ ಸುಮಾರು
ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಇದರ ಜೊತೆಗೆ
ಭರಮಸಾಗರದ ದೊಡ್ಡ ಕೆರೆಗೂ ನೀರು ಹರಿದು ಬರುತ್ತಿದೆ.
ಇದರಿಂದ ಈ ಭಾಗದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.