ಚಳ್ಳಕೆರೆ : ಜಲಧಾರೆ ಈಗಾಗಲೇ ರಾಜ್ಯದಲ್ಲಿ 186 ತಾಲೂಕುಗಳಲ್ಲಿ ಪ್ರಚಾರ ಮಾಡಿ ಅಂತಿಮ ಘಟಕ್ಕೆ ತಲುಪಿದೆ ಈದೇ ಮೇ13. ರಂದು ಬೆಂಗಳೂರು ನಗರದ ನೆಲಮಂಗಳದ ಸಮೀಪದ ಕುಣಿಗಲ್ ರಸ್ತೆ ಬಳಿ ನಾಲ್ಕು ಲಕ್ಷ ಜನಸಂಖ್ಯೆಯ ಜನತಾ ಯಾತ್ರೆ ಮೂಲಕ ಪಕ್ಷದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಚಳ್ಳಕೆರೆ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಎಂ.ರವೀಶ್ ಹೇಳಿದ್ದಾರೆ.


ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಜಲಧಾರೆ ಯಾತ್ರೆಗೆ ಚಳ್ಳಕೆರೆ ಕ್ಷೇತ್ರದಿಂದ ಸುಮಾರು 5ಸಾವಿರ ಜನಸಂಖ್ಯೆ ಭಾಗವಹಿಸಿಲಿದ್ದಾರೆ.

ಜಲಧಾರೆ ಯಾತ್ರೆಯ ಮೂಲಕ ರಾಜ್ಯದಲ್ಲಿ ಕುಡಿಯುವ ನೀರಿನಿಂದ ಹಿಡಿದು ರೈತ ಬೆಳೆಯಲು ಜಲ ಮೂಲಗಳ ಬಗ್ಗೆ ರೈತನಿಗೆ ಮನವರಿಕೆ ಮಾಡುವು ಮೂಲಕ ಜೆಡಿಎಸ್ ಪಕ್ಷದವತಿಯಿಂದ ನಡೆಯಲಿದೆ.
ರಾಜ್ಯದ ಚುಕ್ಕಾಣಿ ಹಿಡಿದ ಆಡಳಿತ ಸರ್ಕಾರಗಳು ಯಾವ ರೀತಿಯಲ್ಲಿ ಜನರನ್ನು ವಂಚನೆಗೆ ಬಲಿ ಮಾಡಿದೆ ಎಂಬುದು ಈಗಾಗಲೇ ಜಲಧಾರೆ ಯಾತ್ರೆಯ ಮೂಲಕ ಜನರಿಗೆ ತಿಳಿಸಿದೆ. ಆದೇ ರೀತಿಯಲ್ಲಿ ಚಳ್ಳಕೆರೆ ಕ್ಷೇತ್ರದಲ್ಲಿ ಕೂಡ ಅಂದಿನ ನಮ್ಮ ಜೆಡಿಎಸ್ ಆಡಳಿತ ಪಕ್ಷದ ಮಾಜಿ ಮುಖ್ಯಮಂತ್ರಿ ಹೆಚ್‌ಡಿ. ಕುಮಾರಸ್ವಾಮಿ ಇದ್ದ ಸಂಧರ್ಭದಲ್ಲಿ ಚಳ್ಳಕೆರೆ ಕ್ಷೇತ್ರಕ್ಕೆ ನೀರು ಹರಿದು ಬರಲು ಕಾರಣಕರ್ತರಾಗಿದ್ದರು,


ಕುಡಿಯುವ ನೀರಿನ, ಭದ್ರಾ ಮೇಲ್ದೆಂಡೆ ಯೋಜನೆ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ 8 ವರ್ಷದ ಯೋಜನೆ ಆದರೆ ಈಗ 16 ವರ್ಷ ಕಳೆದಿದೆ ಆದರೆ ಇನ್ನೂ ಮುಗಿದಿಲ್ಲ, ಆದ್ದರಿಂದ 10 ಸಾವಿರ ಕೋಟಿ ಯೋಜನೆಯನ್ನು 20 ವರ್ಷಕ್ಕೆ ಕೊಂಡುಯ್ಯುದರೆ 2 ಲಕ್ಷ ಕೋಟಿಯನ್ನು 5 ವರ್ಷದಲ್ಲಿ ಖರ್ಚು ಮಾಡಿ ಇರೋ ನೀರನ್ನು ಪ್ರತಿಯೊಂದು ಹಳ್ಳಿಗೆ ನೀಡುವ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಆದ್ದರಿಂದ ಇದು ಜಲಧಾರೆ ಒಂದು ಅದ್ಬುತ ಕಾರ್ಯಕ್ರಮ ಎಂದಿದ್ದಾರೆ.


ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಕಾರ್ಯಕರ್ತರು ಹುಮ್ಮಿಸಿನಿಂದ ಜಲಧಾರೆ ಯಾತ್ರೆಗೆ ಬರುತ್ತಾರೆ ಈಗಾಗಲೇ ಸಕಲ ಸಿದ್ದತೆಗಳನ್ನು ಕೂಡ ಮಾಡಿದೆ, ಸುಮಾರು 5 ಸಾವಿರ ಜನರು ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ ಎಂದರು.


ನಗರಸಭೆ ಸದಸ್ಯ, ನಿಷ್ಠಾವಂತ ಜೆಡಿಎಸ್ ಪಕ್ಷದ ಮುಖಂಡ ಕೆ.ಸಿ.ನಾಗರಾಜ್ ಮಾತನಾಡಿ, 2023ನೇ ಚುನಾವಣೆಯಲ್ಲಿ ಸ್ವತಃ ಶಕ್ತಿಯಿಂದ ಅಧಿಕಾರಕ್ಕೆ ಬರಲು ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಪ್ರತಿ ತಾಲೂಕಿನಿಂದ ಜಲದಾರೆ ಮಹತ್ವದ ಬಗ್ಗೆ ಜನಗಳಿಗೆ ಹರಿವು ಮೂಡಿಸಬೇಕಿದೆ.

ಹೆಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ಇಸ್ರೆಲ್ ಮಾದರಿಯ ರಾಜ್ಯವಾನ್ನಾಗಿಸಲು ಪಣತೊಟ್ಟು ಸುಮಾರು ಸಾವಿರಾರು ಕೋಟಿಗಳನ್ನು ನೀರಿಗಾಗಿ ವ್ಯವಯಿಸಿದ್ದರು.


ಅದರಂತೆ ಜಲಧಾರೆಯ ಸಂದೇಶಗಳನ್ನು ತಿಳಿಸುವ ಮೂಲಕ ಚಳ್ಳಕೆರೆ ಕ್ಷೇತ್ರದಲ್ಲಿ ವಿಶೇಷವಾಗಿ ಯೋಜನೆ ರೂಪಿಸಲಾಗುವುದು, ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಕಳೆದ ವರ್ಷಗಳಲ್ಲಿ ಯೋಜನೆ ರೂಪಿಸಲಾಗಿತ್ತು, ಭದ್ರಾ ಮೇಲ್ದೆಂಡೆ ಯೋಜನೆಗೆ ಕೋಟಿಗಟ್ಟಲೆ ಹಣ ಕೂಡ ಬಿಡುಗಡೆ ಮಾಡಲಾಗಿತ್ತು, ಅಂದಿನ ಕಾರ್ಯಕ್ರಮಗಳಿಗೆ ಇಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರು ಉದ್ಘಾಟಿಸಿ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ ಎಂದು ಸರಕಾರದ ವಿರುದ್ಧ ಚಾಟಿ ಬೀಸಿದರು.


ಈದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ವಿ.ವೈ.ಪ್ರಮೋಧ್, ಶ್ರೀನಿವಾಸ್, ಎಲೆ ವೀರಭದ್ರಣ್ಣ, ತಿಪ್ಪೆಸ್ವಾಮಿ, ವಿರೇಂದ್ರಪ್ಪ, ಮಂಜಣ್ಣ, ರವಿ, ಭಿಮಣ್ಣ, ಬೆಟ್ಟಪ್ಪ ಇತರರು ಇದ್ದರು.

Namma Challakere Local News
error: Content is protected !!