ಚಳ್ಳಕೆರೆ : ದಲಿತ ಸಮುದಾಯದವರು ಗುಡಿ ಗೋಪುರ ನಿರ್ಮಿಸಿಕೊಳ್ಳುವ ಆಸಕ್ತಿ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಗಮನ ನೀಡಬೇಕಿದೆ ಎಂದು ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಭರಮಸಾಗರ ಗ್ರಾಮದಲ್ಲಿ ಬುಧವಾರ ನಡೆದ ಶ್ರೀ ದುರುಗಮ್ಮ ದೇವಿ ನೂತನ ದೇವಸ್ಥಾನದ ಲೋಕಾರ್ಪಣೆ ಮತ್ತು ಕಳಶಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಚರಣೆಗಳಿಗಾಗಿ ಮಾಡುವ,ಆರ್ಥಿಕ ಅಪವ್ಯಯ ತಡೆಯುತ್ತಾ,ಸುಭದ್ರ ಬದುಕಿನ ಕಡೆ ನಾವು ಸಾಗಬೇಕಿದೆ, ಜನ್ಮ ನೀಡಿದ ತಂದೆ ತಾಯಿಗಿಂತ ಮಿಗಿಲಾದ ದೇವರಿಲ್ಲ, ಅವರುಗಳನ್ನೆ ಆರಾಧಿಸಿ ಪೂಜಿಸಿ, ಗೌರವಿಸುವುದು ಶ್ರೇಷ್ಠ ಕಾರ್ಯ,

ತಾರತಮ್ಯದ ಧರ್ಮ ಮತ್ತು ದೇವರುಗಳಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ದೂರ ಉಳಿದಿದ್ದರು, ಶೋಷಿತರು ಮತ್ತು ದಲಿತರು ಶೈಕ್ಷಣಿಕವಾಗಿ ಮುಂದೆ ಬರಲು ಶ್ರಮವಹಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಮರ್ಥರಾಯ ಮಾತನಾಡಿ, ಧಾರ್ಮಿಕ ಹಬ್ಬಗಳನ್ನು ಆಚರಣೆ‌ ಮಾಡುವುದರಿಂದ ಸಮುದಾಯ‌‌ದಲ್ಲಿನ ಭಿನ್ನಭಿಪ್ರಾಯ ಮರೆತು ಅಭಿದ್ದಿ ಪಥದತ್ತ ಸಾಗುತ್ತದೆ, ಇಂದಿನ ಯುವ ಪೀಳಿಗೆ ಶಿಕ್ಷಣವನ್ನು ಕಲಿತು ಶೈಕ್ಷಣಿಕವಾಗಿ ಮುಂದೆ ಬರಬೇಕು,

ನಾವೆಲ್ಲರು ಒಂದೆಡೆ ಸೇರಲು ಎಲ್ಲರೊಂದಿಗೆ ಪರಸ್ಪರ ಪ್ರೀತಿ ವಿಶ್ವಾಸ ಸ್ನೇಹದಿಂದ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ವೀರಭದ್ರಪ್ಪ, ರಂಗಸ್ವಾಮಿ,ಸದಾನಂದ,ಸುರೇಶ್, ಮಲ್ಲಿಕಾರ್ಜುನ್,ಕೃಷ್ಣಪ್ಪ, ನಾಗರಾಜ್, ಜಿ. ಪ್ರತಿಭ, ಗೋವಿಂದಪ್ಪ ಮೊದಲಾದವರು ಇದ್ದರು.

Namma Challakere Local News
error: Content is protected !!