ಚಳ್ಳಕೆರೆ ನ್ಯೂಸ್ :

2023ನೇ ಸಾಲಿನಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ ಸಂಪೂರ್ಣ ಮಳೆ ಬಾರದೇ ರೈತರು ಕಂಗಾಲಾಗಿದ್ದು
ಇಟ್ಟಂತಹ ಬೆಳೆ ಒಣಗಿಹೋಗಿದ್ದು, ಬೆಳೆಗಳು ಕೈಗೆ ಸಿಕ್ಕಿರುವುದಿಲ್ಲ

ಆದ್ದರಿಂದ 2024 ರಲ್ಲಿ
ತಾಲ್ಲೂಕಿನಾಧ್ಯಂತ ಮುಂಗಾರು ಮಳೆ ಆರಂಭವಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು
ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ದಾಸ್ತಾನು ಮಾಡಿ ಬಿತ್ತನೆಗೆ ಸಂಬಂಧ ಪಟ್ಟಂತಹ ಬಿತ್ತನೆ ಬೀಜ,
ರಸ ಗೊಬ್ಬರ ಮತ್ತು ಸಲಕರಣೆಗಳನ್ನು ಸರ್ಕಾರವು ರೈತರಿಗೆ ಅರ್ಧ ಬೆಲೆಗೆ ಕೊಡಲು ಸರ್ಕಾರಕ್ಕೆ
ಒತ್ತಾಯಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಅವರು ನಗರದ ತಾಲೂಕು ಕಛೇರಿ ಮುಂಬಾಗ ನೂರಾರು ರೈತರೊಟ್ಟಿಗೆ ಸೇರಿ ತಹಶಿಲ್ದಾರ್ ರೇಹಾನ್ ಪಾಷಗೆ ಮನವಿ ಸಲ್ಲಿಸಿ ಮಾತನಾಡಿದರು,

ಚಳ್ಳಕೆರೆ ತಾಲ್ಲೂಕಿನಾದ್ಯಂತ 2023ರಲ್ಲಿ ರೈತರು ಪ್ರಕೃತಿಯ
ವೈಫಲ್ಯ ಮತ್ತು ಕಾಲ ಕಾಲಕ್ಕೆ ಸರಿಯಾಗಿ ಮಳೆ ಬಾರದೆ ರೈತರು ಇಟ್ಟಂತಹ ಬೆಳೆಗಳು ಸುಮಾರು ವರ್ಷಗಳಿಂದ ಸಂಪೂರ್ಣ
ಬೆಳೆ ಒಣಗಿ ಹೋಗಿದ್ದು ಬಹಳ ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದಾರೆ.

ಆದ್ದರಿಂದ 2024 ರಲ್ಲಿ ತಾಲ್ಲೂಕಿನಾದ್ಯಂತ ಅಲ್ಪ ಸ್ವಲ್ಪ
ಮಳೆ ಬಿದ್ದಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದರು‌

ಇನ್ನೂ ಪ್ರಗತಿಪರ ರೈತ ಡಾ. ಆರ್ ಎ.ದಯಾನಂದ ಮೂರ್ತಿ ಮಾತನಾಡಿ,
ಮುಂದೆ ಬೆಳೆ ಇಡಲು ರೈತರಲ್ಲಿ ಯಾವುದೇ ರೀತಿಯ
ಹಣಕಾಸಿನ ಸೌಲಭ್ಯ ಇರುವುದಿಲ್ಲ. ಆದ್ದರಿಂದ ರೈತರಿಗೆ ತೊಂದರೆ ಯಾಗದಂತೆ ಸರ್ಕಾರವು ಬಿತ್ತನೆ ಬೀಜ, ರಸಗೊಬ್ಬರ
ಮತ್ತು ಸಲಕರಣೆಗಳನ್ನು ದಾಸ್ತಾನು ಮಾಡಿ ಸರಿಯಾದ ಸಮಯಕ್ಕೆ ಅರ್ಧ ಬೆಲೆಗೆ ಒದಗಿಸಿಕೊಡಬೇಕೆಂದು ಕರ್ನಾಟಕ ರಾಜ್ಯ
ರೈತ ಸಂಘ ಹಾಗೂ ಹಸಿರು ಸೇನೆ ಚಳ್ಳಕೆರೆ ಶಾಖೆಯು ತಮ್ಮಲ್ಲಿ ಒತ್ತಾಯಿಸುತ್ತವೆ,

ಹಕ್ಕೊತ್ತಾಯಗಳು

  1. ರೈತರಿಗೆ ಸಂಬಂಧ ಪಟ್ಟಂತಹ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಸಲಕರಣಗಳನ್ನು ಅರ್ಧ ಬೆಲೆಗೆ ವಿತರಣೆ
    ಮಾಡಬೇಕು,
  2. ತಾಲ್ಲೂಕಿನ ಬಹಳಷ್ಟು ರೈತರಿಗೆ ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಇನ್ನೂ ಬಂದಿರುವುದಿಲ್ಲ. ಅಂತಹ ರೈತರನ್ನು
    ಗುರುತಿಸಿ ಅವರ ಖಾತೆಗಳಿಗೆ ತಕ್ಷಣ ಹಣ ಬಿಡುಗಡೆ ಮಾಡಬೇಕು,
  3. ಚಳ್ಳಕೆರೆ ತಾಲ್ಲೂಕಿನಲ್ಲಿ ಶೇಂಗಾ ಬೆಳೆಯು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಒಳ್ಳೆಯ ಗುಣಮಟ್ಟದ ಒಳ್ಳೆ
    ಇಳುವರಿ ಬರುವಂತಹ ಶೇಂಗಾವನ್ನು ದಾಸ್ತಾನು ಮಾಡಿ ರೈತರಿಗೆ ಅರ್ಧ ಬೆಲೆಗೆ ವಿತರಣೆ ಮಾಡಬೇಕು,
  4. ರೈತರಿಗೆ ಕೃಷಿಗೆ ಬೇಕಾದ ಕೃಷಿ ಉಪಕರಣಗಳನ್ನು ಸಬ್ಸಿಡಿ ಧರದಲ್ಲಿ ವಿತರಣೆ ಮಾಡ ಬೇಕು ಎಂದರು.

ಇದೇ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಶ್ರೀಕಂಠಮೂರ್ತಿ, ಆರ್.ಬಸವರಾಜ್, ದೇವರಹಳ್ಳಿ ರಾಜಣ್ಣ, ಎರ್ರಿಸ್ವಾಮಿ, ತಿಪ್ಪೇಸ್ವಾಮಿ, ಪ್ರಕಾಶ್, ತಿಪ್ಪೇಸ್ವಾಮಿ ಇತರ ಮಹಿಳಾ ರೈತರು ಪಾಲ್ಗೊಂಡಿದ್ದರು.

ಇನ್ನೂ ವಿಶೇಷವಾಗಿ ರೈತ ಮಹಿಳೆಯರು ತಾಲೂಕು ಕಛೇರಿ ಧ್ವರ ಬಾಗಿನಲ್ಲಿ ಕುಳಿತು ಕೈ ಮುಗಿದು ಕಣ್ಣೀರು ಸುರಿಸುವುದು ಕಂಡು ಬಂದಿತು.

About The Author

Namma Challakere Local News
error: Content is protected !!