ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಶಾತವಾಹನ ಗ್ರಾಮೀಣ
ಅಭಿವೃದ್ಧಿ ಸಂಸ್ಥೆ ಮತ್ತು ವಿಜಯ ಸಂಕಲ್ಪ ದಿನಪತ್ರಿಕೆ ವತಿಯಿಂದ ಬುದ್ದ
ಪೂರ್ಣಿಮಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಗೌತಮ ಬುದ್ಧನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ
ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಪ್ರೋ.ಸಿ ಕೆ ಮಹೇಶ್ವರಪ್ಪ ಮಾತಾಡಿ ಬುದ್ದನ ಬಗ್ಗೆ ಮಾತನಾಡುವ ಬದಲು
ಅವನ ನೀತಿಗಳನ್ನು ಅಳವಡಿಸಿಕೊಂಡು ಬಾಳುವುದು ಎಲ್ಲರ
ಧರ್ಮವಾಗಿದೆ ಹಿಂದೂ ಧರ್ಮದಿಂದ ಮಾದಿಗ ಸಮುದಾಯ
ಹೊರಬಂದು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪರಿಸ್ಥಿತಿ ಇದೆ ಎಂದರು.

ಈ ವೇಳೆ ಮಾತನಾಡಿದ ಚಿಂತಕ ಬರಹಗಾರ ಮೈತ್ರಿ ದ್ಯಾಮಣ್ಣ ಗೌತಮ
ಬುದ್ಧನ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತವಾಗಿರುತ್ತವೆ ಅವುಗಳನ್ನು
ಅಳವಡಿಸಿಕೊಂಡು ಜೀವನ ಸಾಗಿಸುವುದು ಪ್ರತಿಯೊಬ್ಬರ
ಕರ್ತವ್ಯವಾಗಿದೆ ಬುದ್ದನ ಅಷ್ಟಾಂಗ ಮಾರ್ಗಗಳನ್ನು ಅನುಸರಿಸಿದಾಗ
ಮಾತ್ರ ಉತ್ತಮ ಜೀವನ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಾಹಿತಿ ಹಾಗೂ ಪತ್ರಕರ್ತ ಕೊಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ
ಇತ್ತೀಚಿನ ದಿನಗಳಲ್ಲಿ ಸಮಾಜವು ಕಲುಷಿತಗೊಳ್ಳುತ್ತಿದ್ದು ವಿಕೃತಿ
ಮನಸ್ಥಿತಿಯನ್ನು ಹೊಂದುತ್ತಿದೆ ಸಂವಿಧಾನವನ್ನು ಬದಲಾವಣೆ
ಮಾಡುತ್ತೇವೆ ಎಂಬ ಹೀನ ಮನಸ್ಥಿತಿಯವರಿಗೆ ಬುದ್ಧ ಪ್ರಜ್ಞೆಯ
ಅವಶ್ಯಕತೆ ಇದೆ ಎಂದರು.

ಇದೇ ವೇಳೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು
ಅಂಕ ಗಳಿಸಿದ ವಿದ್ಯಾರ್ಥಿಗಳಾದ ಎನ್ ಪಲ್ಲವಿ ಅಮಿತ್ ಸ್ಫೂರ್ತಿ ಸುಜಿತ್
ರವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು

ಕಾರ್ಯಕ್ರಮದಲ್ಲಿ ಸಾಹಿತಿ ಮೂಗೂರು ತೇಜ ನಿವೃತ್ತ ತಹಶಿಲ್ದಾರ್ ಮಲ್ಲಿಕಾರ್ಜುನ, ಪ್ರಗತಿ ಪರ ರೈತ ಡಾ.ಆರ್.ಎ.ದಯಾನಂದ ಮೂರ್ತಿ,
ಶಾತವಾಹನ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ
ಕೃಷ್ಣಮೂರ್ತಿ ನಾಗರಾಜ್ , ಮಲ್ಲಿಕಾರ್ಜುನ, ಸಿಕೆ ಮಹೇಶ್ ಕುಮಾರ್,
ಚಿಕ್ಕಣ್ಣ, ತಿಪ್ಪೇಸ್ವಾಮಿ, ಜಯಣ್ಣ, ಶಿವಣ್ಣ , ಪಿಡಿಒ ಇನಾಯಕ್ ಪಾಷಾ, ಹನುಮಂತಪ್ಪ ,ಆ‌ ದ್ಯಾಮರಾಜ್
ಸೇರಿದಂತೆ ಹಲವರು ಉಪಸ್ಥಿತರಿದ್ದರು.

Namma Challakere Local News

You missed

error: Content is protected !!