ಚಳ್ಳಕೆರೆ ನ್ಯೂಸ್ :
ಬಿ ದುರ್ಗದಲ್ಲಿನ ಕೆರೆಗೆ ಹರಿದು ಬರುತ್ತಿರುವ ಮಳೆ ನೀರು
ಹೊಳಲ್ಕೆರೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮ
ಮಳೆಯಾಗುತ್ತಿದ್ದು,
ಇಂದು ಕೂಡ ಮಳೆಯಾಗಿದೆ. ಬಿದುರ್ಗ ಹಾಗೂ
ರಂಗವನಹಳ್ಳಿ ಗ್ರಾಮಗಳ ಕಡೆ ಬಿದ್ದ ಮಳೆ ನೀರು, ಹಳ್ಳದ ಮೂಲಕ
ಸಮೀಪದ ಶೃಂಗೇರಿ ಹನುಮನಹಳ್ಳಿ ಕೆರೆಗೆ ಹರಿದು ಬಂದಿದೆ.
ಅಲ್ಲದೆ ಹಲವು ಗ್ರಾಮಗಳಲ್ಲಿನ ನೀರಿನ ಕಟ್ಟೆಗಳು ತುಂಬಿವೆ.
ಇದರಿಂದಾಗಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ
ನಿವಾರಣೆ ಆದಂತಾಗಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.